ಮುಂಬೈ : ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗಾನ್ ರಾಣಾವತ್ ಅವರ ಕೇಶ ವಿನ್ಯಾಸಕನನ್ನು ಮುಂಬೈನ ಚಿತ್ರೀಕರಣದ ಸೆಟ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬ್ರ್ಯಾಂಡನ್ ಅಲಿಸ್ಟರ್ ಡಿ ಗೀ(42) ಬಂಧಿಸಿರುವ ಕೇಶ ವಿನ್ಯಾಸಕ. ದಕ್ಷಿಣ ಆಫ್ರಿಕಾದದಲ್ಲಿ ಕೇಶ ವಿನ್ಯಾಸಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಈತ 16 ವರ್ಷದ ಬಾಲಕನ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಸಂಬಂಧ ಮಹಾರಾಷ್ಟ್ರದ ರಾಯ್ಗಡ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಂಗನಾ ಅವರ ಮುಂದಿನ ‘ಮಣಿಕರ್ಣಿಕಾ’ ಸಿನಿಮಾದ ಶೂಟಿಂಗ್ ಸೆಟ್ ನಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.
16 ವರ್ಷದ ಬಾಲಕ ಸಾಮಾಜಿಕ ಜಾಲತಾಣದ ಡೇಟಿಂಗ್ ಆ್ಯಪ್ ನಲ್ಲಿ ತನ್ನ ವಯಸ್ಸು 18 ದಾಟಿದೆ ಎಂದು ಸುಳ್ಳು ಹೇಳಿ ಸೇರಿದ್ದನು. ಈ ಆ್ಯಪ್ ಮೂಲಕ ಆರೋಪಿ ಬ್ರ್ಯಾಂಡನ್ ಪರಿಚಯವಾಗಿದ್ದನು. ಆದರೆ ಆತ ಅನೇಕ ಪುರುಷರ ಜತೆ ಸಂಬಂಧ ಕೂಡ ಬೆಳಸಿದ್ದನು. ಒಂದು ದಿನ ಬಾಲಕನ ರೂಮಿನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಇರುವುದನ್ನು ತಾಯಿ ನೋಡಿದ್ದಾರೆ. ನಂತರ ಬಾಲಕ ತಾನು ಅನೇಕ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೂಡಲೇ ಈ ಬಗ್ಗೆ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಖಾರ್ ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿ ಬ್ರ್ಯಾಂಡನ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಕೋರ್ಟ್ ಅಕ್ಟೋಬರ್ 3 ರವರೆಗೆ ಬ್ರ್ಯಾಂಡನ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ