Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತನುಶ್ರೀ ದತ್ತಾ ಅವರ #ಮಿಟೂ ಚಳುವಳಿಯನ್ನು ಬೆಂಬಲಿಸಿದ ರಣವೀರ್ ಸಿಂಗ್...

ತನುಶ್ರೀ ದತ್ತಾ ಅವರ #ಮಿಟೂ ಚಳುವಳಿಯನ್ನು ಬೆಂಬಲಿಸಿದ ರಣವೀರ್ ಸಿಂಗ್...
ಬೆಂಗಳೂರು , ಸೋಮವಾರ, 8 ಅಕ್ಟೋಬರ್ 2018 (14:18 IST)
ಚಿತ್ರರಂಗವು ಕೆಲಸ ಮಾಡಲು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಯ ಕುರಿತು ರಣವೀರ್ ಸಿಂಗ್ ತಮ್ಮ ಮೌನವನ್ನು ಮುರಿದಿದ್ದಾರೆ. ಇಡೀ ಚಿತ್ರರಂಗ ತನುಶ್ರೀ ದತ್ತಾ ಮತ್ತು ನಾನಾ ಪಾಟೇಕರ್ ಅವರ ಕುರಿತು ಮಾತನಾಡುತ್ತಿದ್ದು ಚಿತ್ರರಂಗವು ಕೆಲಸ ಮಾಡಲು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದೂ ಸಹ ಚರ್ಚೆಯ ವಿಷಯಾಗಿದೆ. ರಣವೀರ್ ಅಂತಿಮವಾಗಿ ತಮ್ಮ ಮೌನವನ್ನು ಮುರಿದಿದ್ದು ಈ ಕುರಿತಂತೆ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಹೆಸರುಗಳನ್ನು ತೆಗೆದುಕೊಳ್ಳಲು ಮತ್ತು ಯಾರಿಗಾದರೂ ಬೆಂಬಲವನ್ನು ಸೂಚಿಸಲು ರಣವೀರ್ ನಿರಾಕರಿಸಿದರೂ ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಉಲ್ಲೇಖಿಸುತ್ತಾ, 'ಲಿಂಗವನ್ನು ಹೊರತುಪಡಿಸಿ ಕಿರುಕುಳ ತಪ್ಪಾಗಿದೆ ಮತ್ತು ಅದು ನಿಜವಾಗಿ ಸಂಭವಿಸಿದ್ದಲ್ಲಿ ಆ ವ್ಯಕ್ತಿಯು ಮುಕ್ತವಾಗಿ ಹೊರಬಂದು ಅದರ ಕುರಿತು ಮಾತನಾಡಲು ಸಾಕಷ್ಟು ಧೈರ್ಯವನ್ನು ತೆಗೆದುಕೊಳ್ಳುತ್ತಾನೆ' ಎಂದು ರಣವೀರ್ ಸಿಂಗ್ ಭಾವಿಸುತ್ತಾರೆ.
 
"ಮಹಿಳೆ, ಪುರುಷ, ಯಾವುದೇ ವ್ಯಕ್ತಿ ಕಿರುಕುಳಕ್ಕೊಳಗಾಗುವುದು ತಪ್ಪು, ಅದು ಕೆಲಸದ ಸ್ಥಳದಲ್ಲಿ, ಸಾರ್ವಜನಿಕವಾಗಿ ಅಥವಾ ಮನೆಯಲ್ಲೇ ಆಗಿರಬಹುದು. ಇದೀಗ ಇವೆಲ್ಲಾ ಉಹಾಪೋಹಗಳಾಗಿವೆ. ಆದರೆ ಇದು ಸಂಭವಿಸಿದ್ದರೆ, ಅದನ್ನು ಸಾರ್ವಜನಿಕವಾಗಿ ಹೇಳಲು ಧೈರ್ಯವನ್ನು ತೆಗೆದುಕೊಳ್ಳುತ್ತದೆ. ನಾನು ಅದನ್ನು ಖಂಡಿತವಾಗಿ ಖಂಡಿಸುತ್ತೇನೆ" ಎಂದು ಡೆಲ್ಲಿಯಲ್ಲಿ ಮಾಧ್ಯಮದ ಮುಂದೆ ಹೇಳಿದ್ದಾರೆ. ದೀಪಿಕಾ ಸಹ ಈ ಕುರಿತು ರಣವೀರ್ ಅವರ ಮಾತುಗಳಿಗೆ ಮತ್ತಷ್ಟು ಪುಷ್ಟಿಯನ್ನು ನೀಡಿದರು. #ಮಿಟೂ ಚಳುವಳಿ ಪುರುಷ v/s ಮಹಿಳೆ ಕುರಿತಾಗಿ ಅಲ್ಲ, ಇದು ಸರಿ v/s ತಪ್ಪಿನ ಕುರಿತಾದುದು ಮತ್ತು ಏನಾದರೂ ತಪ್ಪು ನಡೆದಿದ್ದರೆ ನಾವೆಲ್ಲರೂ ಸೇರಿ ಅದನ್ನು ಅಂತ್ಯಗೊಳಿಸಬೇಕಾಗಿದೆ ಎಂದು ದೀಪಿಕಾ ತಮ್ಮ ವಿಚಾರವನ್ನು ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಂಗನಾರನ್ನು ಬಿಗಿದಪ್ಪಿಕೊಂಡು , ಅವರ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸುತ್ತಿದ್ದ ಆ ನಿರ್ದೇಶಕ ಯಾರು ಗೊತ್ತಾ?