Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎರಡು ವರ್ಷಗಳ ಬಳಿಕ ರಾಣಿ ಮುಖರ್ಜಿ ಪ್ರತ್ಯಕ್ಷ

ಎರಡು ವರ್ಷಗಳ ಬಳಿಕ ರಾಣಿ ಮುಖರ್ಜಿ ಪ್ರತ್ಯಕ್ಷ
Mumbai , ಶನಿವಾರ, 14 ಜನವರಿ 2017 (10:07 IST)
ಬಾಲಿವುಡ್ ಚಿತ್ರ ಮರ್ದಾನಿ ಬಳಿಕ ಬೆಳ್ಳಿತೆರೆಯ ಮೇಲೆ ಕಾಣಿಸಲಿಲ್ಲ ರಾಣಿ ಮುಖರ್ಜಿ. ನಿರ್ದೇಶಕ, ನಿರ್ಮಾಪಕ ಆದಿತ್ಯಾ ಛೋಪ್ರಾರನ್ನು ವರಿಸಿದ ಬಳಿಕ ಸಿನಿಮಾಗಳಿಗೆ ದೂರವಾದ ರಾಣಿ ಈಗ ಒಂದು ಮಗುವಿನ ತಾಯಿ ಎಂಬುದು ಗೊತ್ತಿರುವ ಸಂಗತಿ. 
 
ಈಗ ಎರಡು ವರ್ಷಗಳ ಗ್ಯಾಪ್ ಬಳಿಕ ಸೆಕೆಂಡ್ ಇನ್ನಿಂಗ್ಸ್‌ಗೆ ಸಿದ್ಧವಾಗಿದ್ದಾರೆ. ವಿ ಆರ್ ಫ್ಯಾಮಿಲಿ ಖ್ಯಾತಿಯ ಸಿದ್ದಾರ್ಥ್ ಮಲ್ಹೋತ್ರಾ ಭಿನ್ನವಾದ ಕಥೆಯೊಂದಿಗೆ ಚಿತ್ರವೊಂದರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು ರಾಣಿ ಮುಖರ್ಜಿ ಮಾನಸಿಕ ದಿವ್ಯಾಂಗಳಾಗಿ ಚಿತ್ರದಲ್ಲಿ ಕಾಣಿಸಲಿದ್ದಾರಂತೆ.
 
ಮೊದಲು ಈ ಚಿತ್ರವನ್ನು ಇಮ್ರಾನ್ ಹಸ್ಮಿ, ಅಭಿಷೇಕ್ ಬಚ್ಚನ್ ಜತೆ ಮಾಡಬೇಕು ಎಂದುಕೊಂಡಿದ್ದರಂತೆ. ಅದು ಸಾಧ್ಯವಾಗದ ಕಾರಣ ಹೀರೋ ಪ್ರಧಾನವಾಗಿದ್ದ ಕಥೆಯನ್ನು ಹೀರೋಯಿನ್ ಓರಿಯಂಟೆಡ್ ಮಾಡುತ್ತಿದ್ದಾರೆ. ಈ ಚಿತ್ರವನ್ನು ಯಶ್ ರಾಜ್ ಫಿಲಂಸ್ ಲಾಂಛನದಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಲು ಅಂಗೀಕರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ತ್ರಿಷಾ ಕೃಷ್ಣನ್‌ಗೆ ಕಹಿ ಅನುಭವ, ಶೂಟಿಂಗ್ ಕ್ಯಾನ್ಸಲ್