ಬಾಲಿವುಡ್ ಹೀರೋಯಿನ್ ರಾಣಿ ಮುಖರ್ಜಿ ತನ್ನ ಮಗಳಿಗೆ ಹೃದಯತುಂಬಿ ಪತ್ರವೊಂದನ್ನು ಬರೆದು ಚಕಿತಗೊಳಿಸಿದ್ದಾರೆ. ರಾಣಿ ಮುಖರ್ಜಿ ಮತ್ತುಉ ಆದಿತ್ಯಾ ಚೋಪ್ರಾ ಜೋಡಿಗೆ 2014ರಲ್ಲಿ ಮದುವೆ ನಡೆಯಿತು. 2015ರಲ್ಲಿ ಇವರಿಗೆ ಹೆಣ್ಣುಮಗು ಜನಿಸಿತು.
ತಂದೆತಾಯಿ ಹೆಸರನ್ನೇ ಆಯ್ಕೆ ಮಡಿಕೊಂಡು ತಮ್ಮ ಮಗಳಿಗೆ ಅದಿರಾ ಎಂದು ನಾಮಕರಣ ಮಾಡಿದರು. ಹುಟ್ಟಿದಾಗಿನಿಂದ ತಮ್ಮ ಮಗಳ ಫೋಟೋವನ್ನು ಯಾರಿಗೂ ತೋರಿಸದ ರಾಣಿ ಮುಖರ್ಜಿ ಇದೀಗ ಮೊದಕ ಹುಟ್ಟುಹಬ್ಬದ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಇದಿಷ್ಟೇ ಅಲ್ಲದೆ ಡಿಸೆಂಬರ್ 9, 2015ರಂದು ಜನ್ಮಿಸಿದ ಅದಿರಾ ಹುಟ್ಟುಹಬ್ಬಕ್ಕೆ ಒಂದು ಪತ್ರವನ್ನೂ ಬರೆದು ಅದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಒಂದು ವರ್ಷ ಪೂರ್ಣಗೊಳಿಸಿಕೊಂಡಿರುವ ಅದಿರಾಳನ್ನು ನೋಡಿ ರಾಣಿ ಮುಖರ್ಜಿ ದಂಪತಿಗಳು ತುಂಬಾ ಖುಷಿಯಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.