ಸಿನಿಮಾದಲ್ಲಿನ ಆಕ್ಷೇಪಾರ್ಹ ಸನ್ನಿವೇಶವನ್ನೋ, ದೃಶ್ಯವನ್ನೋ ಕಟ್ ಮಾಡುವುದು ಕೇಳಿದ್ದೇವೆ. ಸೊಂಟದ ಕೆಳಗಿನ ಭಾಷೆ ಬಳಸಿದ್ದರೆ ಅದನ್ನು ಮ್ಯೂಟ್ ಮಾಡುವುದು ಗೊತ್ತು. ಆದರೆ ಏಕಾಏಕಿ 40 ನಿಮಿಷಗಳ ಕಾಲ ಕಟ್ ಎಂದರೆ ಅರ್ಧ ಸಿನಿಮಾನೇ ಕಟ್ ಮಾಡಿದಂತೆ!
ಈ ರೀತಿಯ ಪರಿಸ್ಥಿತಿ ಸೈಫ್ ಆಲಿ ಖಾನ್, ಶಾಹಿದ್ ಕಪೂರ್ ಮತ್ತು ಕಂಗನಾ ರನಾವತ್ ಅಭಿನಯಿಸಿರುವ ರಂಗೂನ್ ಚಿತ್ರದ್ದು. ಸುಮಾರು 2.47 ನಿಮಿಷಗಳ ಕಾಲಾವಧಿಯ ಈ ಚಿತ್ರ ಇತ್ತೀಚೆಗಷ್ಟೆ ಸೆನ್ಸಾರ್ ಆಗಿದ್ದು. ಇದೇ ಶುಕ್ರವಾರ ತೆರೆಕಾಣುತ್ತಿದೆ ಸಹ. ಆದರೆ ಈ ಸಿನಿಮಾವನ್ನು ರೀ ಎಡಿಟ್ ಮಾಡಿ 2 ಗಂಟೆಗೆ ಇಳಿಸಿದ್ದಾರೆ.
ಪ್ರೇಕ್ಷಕರು ಕುಟುಂಬ ಸಮೇತ ಚಿತ್ರವನ್ನು ವೀಕ್ಷಿಸಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ನಿರ್ಮಾಪಕ-ನಿರ್ದೇಶಕರು ತಿಳಿಸಿದ್ದಾರೆ. ಮೂರು ಗಂಟೆಗಳ ಕಾಲಾವಧಿಯ ಸಿನಿಮಾ ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಬೋರಾಗಬಹುದು ಎಂಬ ಕಾರಣಕ್ಕೆ ಕಾಲಾವಧಿಯನ್ನು ಕಡಿತ ಮಾಡಲಾಗಿದೆ ಎಂದು ನಿರ್ದೇಶಕ ವಿಶಾಲ್ ಮತ್ತು ನಿರ್ಮಾಪಕ ಸಾಜಿದ್ ನಡಿಯಾಡ್ವಾಲಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.