ಮುಂಬೈ: ಸದಾ ವಿವಾದಾತ್ಮಕ ಟ್ವೀಟ್, ಫೋಟೋಗಳಿಂದ ಸುದ್ದಿ ಮಾಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಸಾನಿಯಾ ಮಿರ್ಜಾ ಮೇಲೆ ಬಿದ್ದಿದೆ.
ತಮ್ಮ ನಿರ್ದೇಶನದ ಕಿರು ಚಿತ್ರ ‘ಮೇರೀ ಬೇಟಿ ಸನ್ನಿ ಲಿಯೋನ್ ಬನ್ ನಾ ಚಾಹ್ತಾ ಹೈ’ ಯ ಪ್ರಚಾರ ಮಾಡುವ ಭರದಲ್ಲಿ ರಾಮ್ ಗೋಪಾಲ್ ಸಾನಿಯಾ ಮಿರ್ಜಾ ಟೆನಿಸ್ ಆಡುವಾಗ ಒಳಉಡುಪು ಕಾಣುವಂತಹ ಭಂಗಿಯ ಫೋಟೋ ಪ್ರಕಟಿಸಿ ವಿವಾದಕ್ಕೀಡಾಗಿದ್ದಾರೆ.
ತಮ್ಮ ಚಿತ್ರದ ಕಥಾವಸ್ತುವಿಗೆ ಉದಾಹರಣೆ ನೀಡುವುದೇನೋ ಸರಿ. ಆದರೆ ಹಾಗಂತ ಸಾನಿಯಾ ಮಿರ್ಜಾರಂತಹ ಖ್ಯಾತ ತಾರೆಗೆ ಮುಜುಗರ ತರುವಂತಹ ಫೋಟೋ ಪ್ರಕಟಿಸುವುದು ಎಷ್ಟು ಸರಿ ಎಂಬುದು ಅಭಿಮಾನಿಗಳ ಪ್ರಶ್ನೆ. ಈ ಫೋಟೋ ಸಾನಿಯಾ ಗಮನಕ್ಕೆ ಬಂದರೆ ಮತ್ತಷ್ಟು ಕೆಸರೆರಚಾಟ ನಡೆಯುತ್ತದೋ?