ಮುಂಬೈ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಪಾಲಾಗಿ ಹೊರಬಂದ ಬಳಿಕ ಕೆಲವು ಸಮಯ ರಾಜ್ ಕುಂದ್ರಾ ಸಾಮಾಜಿಕ ಜಾಲತಾಣದಿಂದ ಹೊರಗುಳಿದಿದ್ದರು. ಇದೀಗ ಮತ್ತೆ ರಾಜ್ ಕುಂದ್ರಾ ಇನ್ ಸ್ಟಾಗ್ರಾಂಗೆ ಮರಳಿದ್ದಾರೆ.
ಆದರೆ ರಾಜ್ ಕುಂದ್ರಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಏಕೈಕ ಒಂದು ಖಾತೆಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಆದರೆ ಇದು ಪತ್ನಿ ಶಿಲ್ಪಾ ಶೆಟ್ಟಿಯದ್ದಂತೂ ಅಲ್ಲ!
ಬದಲಾಗಿ ಶಿಲ್ಪಾ ಮತ್ತು ರಾಜ್ ಕುಂದ್ರಾ ಅವರ ರೆಸ್ಟೋರೆಂಟ್ ಖಾತೆಯನ್ನು ಮಾತ್ರ ರಾಜ್ ಕುಂದ್ರಾ ಈಗ ಫಾಲೋ ಮಾಡುತ್ತಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ರಾಜ್ ಕುಂದ್ರಾ ಸಾರ್ವಜನಿಕ ಜೀವನದಿಂದ ಆದಷ್ಟು ದೂರವೇ ಇದ್ದರು.