ನವದೆಹಲಿ : ಮಂಗಳವಾರ ದೆಹಲಿಯಲ್ಲಿ ಅದ್ದೂರಿಯಾಗಿ ನಡೆದ ಪ್ರಿಯಾಂಕಾ-ನಿಕ್ ಆರತಕ್ಷತೆ ಕಾರ್ಯಕ್ರಮಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜೋಡಿ ಶನಿವಾರ ಹಾಗೂ ಭಾನುವಾರ ಎರಡೂ ಪದ್ಧತಿಗಳಂತೆ ಜೋಧ್ಪುರದಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ನಂತರ ದೆಹಲಿ ತಾಜ್ ಪ್ಯಾಲೆಸ್ ಹೋಟೆಲ್ನಲ್ಲಿ ಮಂಗಳವಾರ ಪ್ರಿಯಾಂಕ -ನಿಕ್ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಜರಾಗಿ ಹೂಗುಚ್ಚ ಕೊಟ್ಟು ನವದಂಪತಿಗಳಿಗೆ ಶುಭ ಕೋರಿದ್ದಾರೆ.
ದೆಹಲಿ ರಿಸೆಪ್ಷನ್ ನಲ್ಲಿ ಪ್ರಿಯಾಂಕ ಚೋಪ್ರಾ ಸಿಲ್ವರ್ ಬಣ್ಣದ ಲೆಹಂಗಾ ಜತೆಗೆ ಮ್ಯಾಚ್ ಆಗುವ ಆಭರಣಗಳನ್ನು ತೊಟ್ಟು ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದರೆ, ನಿಕ್ ಜೋನಾಸ್ ಕಪ್ಪು ಬಣ್ಣದ ಸೂಟ್ ಧರಿಸಿ ಪಾಶ್ಚಾತ್ಯ ಲುಕ್ನಲ್ಲಿ ಮಿಂಚಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.