ಸ್ಯಾಂಡಲ್ವುಡ್ನ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಿಕೇಶಾ ಪಟೇಲ್ ಈಗ ಕಲರ್ಫುಲ್ ಬೆಡಗಿ. ಆಗಾಗ ಈಜುಡುಗೆ, ಬಿಕಿನಿ, ಟೂಪೀಸ್ ಅದೂ ಇದೂ ಎಂದು ಸುದ್ದಿ ಮಾಡುತ್ತಿರುತ್ತಾರೆ. ಈ ಸಲ ಅವರು ಕಪ್ಪು ಬಿಕಿನಿಯಲ್ಲಿ ಮಿಂಚಿದ್ದಾರೆ.
’ನರಸಿಂಹ’ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ನಿಕೇಶಾ, ಬಳಿಕ ಡಕೋಟಾ ಪಿಕ್ಚರ್, ವರದನಾಯಕ, ನಮಸ್ತೇ ಮೇಡಂ, ಅಲೋನ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸ್ಯಾಂಡಲ್ವುಡ್ ಚಿತ್ರರಂಗ ಕೈಹಿಡಿಯಲಿಲ್ಲ. ಹಾಗಾಗಿ ಪಕ್ಕದ ಆಂಧ್ರದಲ್ಲಿಈಗ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
ಗುಂಟೂರು ಟಾಕೀಸ್ 2 ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ ನಿಕೇಶಾ. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಹಾಟ್ ಮತ್ತು ಬೋಲ್ಡ್ ಫೋಟೋ ಹಂಚಿಕೊಂಡಿದ್ದಾರೆ. ಬಹುಶಃ ಚಿತ್ರೋದ್ಯಮದ ಇನ್ನಷ್ಟು ಮಂದಿಯನ್ನು ಸೆಳೆಯುವ ಪ್ರಯತ್ನ ಇದು ಎಂದೇ ಭಾವಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.