ಇದು ಟಾಲಿವುಡ್ ಬಾಹುಬಲಿ ಚಿತ್ರದ ಕಥೆಯಲ್ಲ. ಉತ್ತರಖಂಡದ ಹೊಸ ಬಾಹುಬಲಿ ಕಥೆ! ಪ್ರಭಾಸ್ ಪಾತ್ರದಲ್ಲಿ ಪಕ್ಕಾ ಫಿಟ್ ಆಗಿದ್ದಾರೆ ಈ ಹೊಸ ಹೀರೋ. ಅವರ ಹೆಸರು ಹರೀಶ್ ರಾವತ್. ಉತ್ತರಾಖಂಡದ ಹಾಲಿ ಮುಖ್ಯಮಂತ್ರಿ. ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಪ್ರಚಾರಕ್ಕಾಗಿ ಬಾಹುಬಲಿ ಟ್ರೇಲರನ್ನೇ ಬಹಳಿಸಿಕೊಂಡಿರುದು ಈಗ ವೈರಲ್ ಆಗಿದೆ.
ಈ ಹೊಸ ಟ್ರೇಲರ್‌ನಲ್ಲಿ ಪ್ರಭಾಸ್ ಪಾತ್ರದಲ್ಲಿ ಹರೀಶ್ ರಾವತ್, ತನಿಕೇಳ್ಳಭರಣಿ ಪಾತ್ರದಲ್ಲಿ ಮೋದಿ ಕಾಣಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಶಿವಲಿಂಗವನ್ನು ಭುಜದ ಮೇಲೆ ಹೊತ್ತಿದ್ದರೆ...ಇಲ್ಲಿ ಹರೀಶ್ ರಾವತ್ ಉತ್ತರಖಂಡವನ್ನೇ ಹೊರುತ್ತಿರುವಂತೆ ಮಾರ್ಫ್ ಮಾಡಿದ್ದಾರೆ.
ರಾವತ್ ಹಾಗೆ ಹೊತ್ತುಕೊಂಡು ಹೋಗುತ್ತಿದ್ದರೆ ಚಕಿತಚಿತ್ತರಾಗಿ ನೋಡುತ್ತಿದ್ದಾರೆ ಮೋದಿ. ಉತ್ತರಾಖಂಡದ ರಕ್ಷಕನ ತರಹ ರಾವತ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಚಿತ್ರಿಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ ಈ ವಿಡಿಯೋದಲ್ಲಿ ಇದ್ದಾರೆ. ಕೇವಲ ಎರಡು ದಿನಗಳಲ್ಲಿ ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಸಲ ವೀಕ್ಷಿಸಲಾಗಿದೆ.
ವಿಶೇಷ ಎಂದರೆ ಐದು ಸಾಲಿರಕ್ಕೂ ಅಧಿಕ ಷೇರ್ ಆಗಿದೆ. ವಿಡಿಯೋದ ಕೊನೆಯಲ್ಲಿ ಸಂದೇಶವೂ ಇದೆ. ದಿಲ್ ಕಿ ಬಾತ್ ಸುನೆ..ಹರೀಶ್ ರಾವತ್‌ಕೋ ಚುನೆ (ಮನಸ್ಸಿನ ಮಾತು ಕೇಳಿ, ಹರೀಶ್ ರಾವತ್‍ರನ್ನು ಆಯ್ಕೆ ಮಾಡಿ). ಈ ವಿಡಿಯೋದಲ್ಲಿ ಪಕ್ಷದ ಚಿನ್ಹೆ, ಬಾವುಟ ಸಹ ಇದೆ. ಈ ವಿಡಿಯೋಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ರಾವತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.