ಜೈಪುರ: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರವಾಗಿದ್ದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದಲ್ಲಿ ಇತಿಹಾಸ ತಿರುಚಲಾಗ್ತಿದೆ ಎಂದು ಆರೋಪಿಸಿ ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತವಾಗಿದ್ದು, ಈಗ ಈ ವಿವಾದವನ್ನು ಅದರ ನಿರ್ಮಾಪಕ ಕಮಲ್ ಜೈನ್ ಬಗೆಹರಿಸಿದ್ದಾರೆ.
ನಿರ್ಮಾಪಕ ಕಮಲ್ ಜೈನ್ ಅವರು ಈ ಸಿನಿಮಾದಲ್ಲಿ ಕೆಲವು ವಿವಾದಿತ ದೃಶ್ಯಗಳಿವೆ ಎಂದು ಆಕ್ಷೇಪಣೆ ಮಾಡಿದ್ದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾರನ್ನು ಭೇಟಿಯಾಗಿ’ ಈ ಸಿನಿಮಾದಲ್ಲಿ ಭಾರತದ ಯಾವುದೇ ಸಮುದಾಯಕ್ಕೆ ಧಕ್ಕೆಯಾಗುವಂಥ ಅಂಶಗಳಿಲ್ಲ. ಯಾವುದೇ ಪ್ರೇಮ ದೃಶ್ಯಗಳಿಲ್ಲ, ಕೇವಲ ಐತಿಹಾಸಿಕ ಅಂಶಗಳು ಮಾತ್ರ ಇರುವ ಇದರಲ್ಲಿ ರಾಣಿ ಲಕ್ಷ್ಮಿಬಾಯಿಯ ಪಾತ್ರವನ್ನು ಅತ್ಯುತ್ತಮವಾಗಿ ಬಿಂಬಿಸಲಾಗಿದೆ ಎಂದು ಅವರು ಲಿಖಿತ ರೂಪದಲ್ಲಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಈ ವಿವಾದ ಬಗೆಹರಿದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ