ಮುಂಬೈ: ಬಾಲಿವುಡ್ ಹಿರಿಯ ನಟಿ, ಬಿಜೆಪಿ ನಾಯಕಿ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಚಂಢೀಘಡ ಬಿಜೆಪಿ ನಾಯಕ ಅರುಣ್ ಸೂದ್ ಬಹಿರಂಗಪಡಿಸಿದ್ದಾರೆ. ಆದರೆ ಈ ಬಗ್ಗೆ ನಟಿಯಾಗಲೀ, ಆಕೆಯ ಕುಟುಂಬಸ್ಥರಾಗಲೀ ಯಾವುದೇ ಮಾಹಿತಿ ನೀಡಿಲ್ಲ.
ಖ್ಯಾತ ನಟ, ಬಿಜೆಪಿ ನಾಯಕ ಅನುಪಮ್ ಖೇರ್ ಪತ್ನಿಯಾಗಿರುವವ ಕಿರಣ್ ಸದ್ಯಕ್ಕೆ ಮುಂಬೈನಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾರೆ ಎಂದು ಅರುಣ್ ಸೂದ್ ಹೇಳಿದ್ದಾರೆ. ಕಳೆದ ವರ್ಷ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈಗ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಸೂದ್ ಹೇಳಿದ್ದಾರೆ.
ಕಳೆದ ವರ್ಷ ನವಂಬರ್ ನಲ್ಲಿ ಆಕೆಗೆ ಎಡಗೈಗೆ ಪೆಟ್ಟಾಗಿತ್ತು. ಚಂಢೀಘಡದ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ಹೋದಾಗ ಮೈಲೋಮಿಯಾ ಇರುವುದು ಪತ್ತೆಯಾಗಿತ್ತು. ಈ ರೋಗ ಆಕೆಯ ಬಲ ಕೈ ಮತ್ತು ಬಲ ಭುಜಕ್ಕೆ ಹರಡಿದೆ. ಇದಕ್ಕಾಗಿ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅರುಣ್ ಸೂದ್ ಮಾಹಿತಿ ನೀಡಿದ್ದಾರೆ.