ಮುಂಬೈ : ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಾರಾ ಅಲಿ ಖಾನ್ ನಟನೆಯ ಕೇದಾರ್ನಾಥ್ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ.
ಹೌದು. ಕೇದಾರ್ನಾಥ್ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಕೂಡ ಪಡೆದಿದೆ. ಆದರೆ ಇದೀಗ ಈ ಚಿತ್ರ ಉತ್ತರಾಖಂಡ್ನ ಕೇದಾರನಾಥದ ಪುರೋಹಿತ ವರ್ಗದವರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಚಿತ್ರವನ್ನು ನಿಷೇಧಿಸುವಂತೆ ಕೇಳಿಕೊಂಡಿದ್ದಾರೆ.
ಈ ಚಿತ್ರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ದೇವಸ್ಥಾನದ ಆವರಣದಲ್ಲಿ ಚಿತ್ರಿಸಲಾದ ಡ್ಯಾನ್ಸ್ ದೃಶ್ಯಾವಳಿಗಳು ಆಶ್ಲೀಲವಾಗಿವೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಚಿತ್ರ ಲವ್ ಜಿಹಾದ್ ವಿಷಯವನ್ನು ಪ್ರೋತ್ಸಾಹಿಸುತ್ತದೆ ಎಂಬ ಆರೋಪದ ಹಿನ್ನಲೆ ಈ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.