ಮುಂಬೈ: ಸೈಫ್ ಅಲಿ ಖಾನ್ ಮುದ್ದಿನ ಮಡದಿ, ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೆ ಗರ್ಭಿಣಿಯೇ? ಹೀಗೊಂದು ಅನುಮಾನ ಹುಟ್ಟಿದ್ದು, ಕರೀನಾ ಫೋಟೋ ನೋಡಿ.
ಈಗಾಗಲೇ ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಎರಡು ವರ್ಷದ ಪುತ್ರನಿದ್ದಾನೆ. ಇದೀಗ ಕರೀನಾ ಉಬ್ಬು ಹೊಟ್ಟೆ ದರ್ಶನ ಮಾಡಿದ್ದು ನೋಡಿ ಅಭಿಮಾನಿಗಳು ಆಕೆ ಮತ್ತೆ ಗರ್ಭಿಣಿಯಾ ಎಂದು ಕೇಳಲಾರಂಭಿಸಿದ್ದಾರೆ.
ಆದರೆ ಈ ಬಾರಿ ಕರೀನಾ ಗರ್ಭಿಣಿಯಾಗಿದ್ದು ನಿಜ ಜೀವನದಲ್ಲಿ ಅಲ್ಲ. ‘ಗುಡ್ ನ್ಯೂಸ್’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕರೀನಾ ಆ ಚಿತ್ರದ ಪಾತ್ರಕ್ಕಾಗಿ ಈ ರೀತಿ ಗರ್ಭಿಣಿಯ ವೇಷ ತೊಟ್ಟಿದ್ದಾರೆ. ಆಕೆ ಸೆಟ್ ನಲ್ಲಿ ಈ ರೀತಿ ಉಬ್ಬು ಹೊಟ್ಟೆ ದರ್ಶನ ಮಾಡಿದ್ದು ನೋಡಿ ಅಭಿಮಾನಿಗಳು ಏನೇನೋ ಅಂದುಕೊಂಡರು ಅಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.