ಮುಂಬೈ: ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಮೊಹಮ್ಮದ್ ರಫಿ ಅವರನ್ನು ಅವಹೇಳನ ಮಾಡುವಂತಹ ಸಂಭಾಷಣೆ ಬಗ್ಗೆ ಸೋನು ನಿಗಂ ಮತ್ತು ಚಿತ್ರ ನಿರ್ದೇಶಕ ವಿನು ವಿದು ಚೋಪ್ರಾ ಅವರು ಹೇಳಿದ ಅಭಿಪ್ರಾಯಗಳ ಕುರಿತು ಕರಣ್ ಜೋಹರ್ ಕಿಡಿ ಕಾರಿದ್ದಾರೆ.
ಈ ವಿಚಾರದಲ್ಲಿ ಸೋನು ನಿಗಂ ಮತ್ತು ವಿದು ಚೋಪ್ರಾ ರಫಿ ಪುತ್ರನ ಪರವಾಗಿ ಮಾತನಾಡಿದ್ದರು. ಕೆಲವು ಗಾಯಕರು ಸ್ವಂತ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಇನ್ನು ಕೆಲವು ಸಿನಿಮಾ ನಿರ್ದೇಶಕರು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಕರಣ್ ಟ್ವಿಟರ್ ನಲ್ಲಿ ಕುಟುಕಿದ್ದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸೋನು ನಿಗಂ “ನಮ್ಮ ಕುಟುಂಬದ ವಿಷಯ ಬಂದಾಗ ಮಾತ್ರ ಕೆಲವರಿಗೆ ರಕ್ತ ಕುದಿಯುತ್ತದೆ. ಹಾಗಾದರೆ ಇದು ನಮ್ಮ ಕುಟುಂಬವನ್ನು ಪ್ರೀತಿಸುವುದು ಮತ್ತು ಇನ್ನೊಬ್ಬರ ಕುಟುಂಬವನ್ನು ಅಗೌರವಿಸುವುದು ಎಂದ ಹಾಗಾಯಿತು” ಎಂದಿದ್ದಾರೆ.
ವಿನು ವಿದು ಚೋಪ್ರಾಗೆ ಮೊಹಮ್ಮದ್ ರಫಿ ಬಗ್ಗೆ ಹೇಳಿರುವ ಸಂಭಾಷಣೆ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಅವರನ್ನು ಪ್ರಶ್ನಿಸಿದಾಗ ಅವರು ನಾನು ಈ ಸಿನಿಮಾ ನೋಡಿಲ್ಲ. ನೋಡುವ ಕುತೂಹಲವೂ ಇಲ್ಲ ಎಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ