ಮುಂಬೈ: ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಪ್ರತೀ ವರ್ಷ ಅದ್ಧೂರಿಯಾಗಿ ಬರ್ತ್ ಡೇ ಪಾರ್ಟಿ ಆಯೋಜಿಸುತ್ತಾರೆ. ಇದುವರೆಗೆ ಈ ಪಾರ್ಟಿಗೆ ಕೇವಲ ಬಾಲಿವುಡ್ ಕಲಾವಿದರು ಮಾತ್ರ ಬರುತ್ತಿದ್ದರು.
ಆದರೆ ಈಗ ದಕ್ಷಿಣ ಭಾರತೀಯ ಸಿನಿಮಾಗಳೂ ಬಾಲಿವುಡ್ ಗೆ ಪೈಪೋಟಿ ನೀಡುತ್ತಿವೆ. ಹೀಗಾಗಿ ಬಾಲಿವುಡ್ ನವರು ಈಗ ದಕ್ಷಿಣ ಭಾರತದ ಸಿನಿಮಾಗಳತ್ತ ಚಿತ್ತಹರಿಸುತ್ತಿದ್ದಾರೆ.
ಹೀಗಾಗಿಯೇ ಈ ಬಾರಿ ಕರಣ್ ಬರ್ತ್ ಡೇ ಪಾರ್ಟಿಗೆ ರಾಕಿಂಗ್ ಸ್ಟಾರ್ ಯಶ್ ಗೂ ಆಹ್ವಾನವಿರಲಿದೆ ಎನ್ನಲಾಗಿದೆ. ಕೆಜಿಎಫ್ 2 ಟ್ರೈಲರ್ ರಿಲೀಸ್ ಈವೆಂಟ್ ಗೆ ಕರಣ್ ಜೋಹರ್ ನಿರೂಪಕರಾಗಿ ಬಂದಿದ್ದರು. ಈ ವೇಳೆ ಯಶ್ ರನ್ನು ಹಾಡಿ ಹೊಗಳಿದ್ದರು. ಕೆಜಿಎಫ್ ಸಿನಿಮಾ ಬಗ್ಗೆಯೂ ಕರಣ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ತಮ್ಮ ಬರ್ತ್ ಡೇ ಪಾರ್ಟಿಗೆ ಯಶ್ ಗೆ ಆಹ್ವಾನ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.