ಬಾಲಿವುಡ್‌ನಲ್ಲಿ 2017ನೇ ವರ್ಷ ಹೊಸ ಹೊಸ ಆಸೆ, ಕನಸುಗಳನ್ನು ಚಿಗುರಿಸಿದೆ. 2016ರಲ್ಲಿ ವಿಚ್ಛೇದನ, ಬ್ರೇಕ್ ಅಪ್‍ಗಳಲ್ಲೇ ಕಳೆದುಹೋಯಿತುಉ. ಆದರೆ 2107ರಲ್ಲಿ ಮಾತ್ರ ಸಾಕಷ್ಟು ಮದುವೆಗಳು ನಡೆಯುವ ಸೂಚನೆ ಸಿಕ್ಕಿದೆ. ಮೊದಲು ಅನುಷ್ಕಾ ಶರ್ಮಾ, ಆಮೇಲೆ ಸೋನಾಕ್ಷಿ ಸಿನ್ಹಾ ಈಗ ಬಾಲಿವುಡ್ ಕ್ವೀನ್ ಕಂಗನಾ ರನಾವತ್.
ಕಂಗನಾಗೆ ಮದುವೆ ಮೇಲೆ ಮನಸು ಬಿದ್ದಿದೆ. 2107ರಲ್ಲಿ ಹಸೆಮಣೆ ಏರುತ್ತೇನೆ ಅಂತಿದ್ದಾರೆ. ಹೃತಿಕ್ ರೋಷನ್ ಜೊತೆಗೆ ಅಷ್ಟೆಲ್ಲಾ ಕಿರಿಕಿರಿ ಆದರೂ ಪ್ರೀತಿ ಪ್ರೇಮ ಮದುವೆ ಸಂಬಂಧಗಳಲ್ಲಿ ನಂಬಿಕೆ ಇದೆ ಎಂದಿದ್ದಾರೆ. ಮದುವೆ ಬಗ್ಗೆ ಆಸಕ್ತಿ ಇರುವ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬರಲಿರುವ ವರ್ಷ ಅಭಿಮಾನಿಗಳು ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ಉತ್ತರಿಸುತ್ತಾ ಮದುವೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕಂಗನಾರ ಕೈಹಿಡಿಯುವ ಅದೃಷ್ಟವಂತ ಯಾರು ಎಂಬ ಪ್ರಶ್ನೆಗೆ ಅವರ ಉತ್ತರ ಒಂದು ಸಣ್ಣ ನಗು ಅಷ್ಟೇ. ಅಲ್ಲಿಂದ ಮಾತು ಬದಲಾಯಿಸಿದ್ದಾರೆ ಕಂಗನಾ. ಸದ್ಯಕ್ಕೆ ರಂಗೂನ್, ಸಿಮ್ರಾನ್ ಚಿತ್ರಗಳಲ್ಲಿ ಕಂಗನಾ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.