Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೌದ್ಧ ಧರ್ಮ ಸ್ವೀಕರಿಸಿದ ಅಕ್ಷರಾ ಹಾಸನ್

ಬೌದ್ಧ ಧರ್ಮ ಸ್ವೀಕರಿಸಿದ ಅಕ್ಷರಾ ಹಾಸನ್
ಚೆನ್ನೈ , ಶುಕ್ರವಾರ, 28 ಜುಲೈ 2017 (10:37 IST)
ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.ಕಷ್ಟಪಡುವುದರಿಂದಲೆ ಜೀವನದಲ್ಲಿ ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗುತ್ತದೆ ಎಂದಿರುವ ಅಕ್ಷರಾ ಇತ್ತೀಚೆಗಷ್ಟೇ ತಾವು ಬೌದ್ಧಧರ್ಮವನ್ನು ಸ್ವೀಕರಿಸಿದ್ದಾಗಿ ಹೇಳಿದ್ದಾರೆ.
 
ಬೌದ್ಧಧರ್ಮವು ಆಧ್ಯಾತ್ಮಿಕವಾಗಿ ಧರ್ಮದ ಕಡೆಗೆ ಒಲವು ತೋರುತ್ತದೆ. ಈ ಕಾರಣದಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ನನ್ನ ಸಹೋದರಿಯಂತೆ ನಾನು ನಾಸ್ತಿಕಳು. ನನಗೆ ಬೌದ್ಧ ಧರ್ಮನದ ಆಚರಣೆ ತತ್ವ ಸಿದ್ಧಾಂತಗಳು ಇಷ್ಟವಾಯಿತು. ಹೀಗಾಗಿ ಮತಾಂತರೊಗೊಂಡಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. 
 
ನನ್ನ ತಂದೆ, ತಾಯಿ ಮತ್ತು ,ಸಹೋದರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡುವುದು ನನ್ನ ಬಯಕೆಯಾಗಿದೆ. ಆ ಮೂಲಕ ನಾನು ನಿರ್ದೇಶನಕ್ಕೆ ಸೂಕ್ತವಾದವಳು ಎಂಬುದನ್ನು ತೋರಿಸುತ್ತೇನೆ ಎಂದು ವಿವರಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಅಹಹಾ… ದೀಪಿಕಾ ಚುಂಬನ!.. ಬಾಯಿ ಚಪ್ಪರಿಸಿಕೊಂಡ ರಣವೀರ್ ಸಿಂಗ್