ಬಾಲಿವುಡ್ ನಟಿ ವಿದ್ಯಾ ಬಾಲನ್, ಅರ್ಜುನ್ ರಾಮ್ ಪಾಲ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರ ಕಹಾನಿ 2. ಉತ್ತರ ಪ್ರದೇಶ ಸರಕಾರ ಈ ಚಿತ್ರಕ್ಕೆ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿದೆ ಎಂದು ವಿದ್ಯಾ ಬಾಲನ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಚಿಕ್ಕಮಕ್ಕಳ ಅಪಹರಣದಂತ ಸೂಕ್ಷ್ಮ ವಿಚಾರನ್ನು ತೆಗೆದುಕೊಂಡು ಸುಜಯ್ ಘೋಷ್ ಈ ಚಿತ್ರವನ್ನು ತೆರೆಗೆ ತಂದಿದ್ದಾರೆ. ಈಗಾಗಲೆ ಬಿಡುಗಡೆಯಾಗಿರುವ ಚಿತ್ರವನ್ನು ಇನ್ನಷ್ಟು ಜನ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ ಘೋಷ್.
ಡಿಸೆಂಬರ್ 2ರಂದು ಬಿಡುಗಡೆಯಾದ ಕಹಾನಿ 2 ಚಿತ್ರಕ್ಕೆ ದುರ್ಗಾ ರಾಣಿ ಸಿಂಗ್ ಎಂಬ ಅಡಿಬರಹ ಇದೆ. ಸುಮಾರು ರು.17 ಕೋಟಿಯಲ್ಲಿ ನಿರ್ಮಿಸಿರುವ ಈ ಚಿತ್ರ ಬಾಕ್ಸ್ ಆಫೀಸಲ್ಲು ರು. 51 ಕೋಟಿ ಬಾಚಿಕೊಂಡಿದೆ. ವಿಮರ್ಶಕರ ವಲಯದಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಚಿತ್ರವನ್ನು ಒಪ್ಪಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.