ಮುಂಬೈ: ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಂಜಯ್ ದತ್ ಜೀವನಾಧಾರಿತ ಸಿನಿಮಾವೊಂದರಲ್ಲಿ ಜಾಕಿಶ್ರಾಫ್ ಸುನಿಲ್ ದತ್ ಅವರ ಪಾತ್ರ ನಿಭಾಯಿಸಲಿದ್ದಾರೆ.
ವಿನೋದ್ ಛೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸುನಿಲ್ ದತ್ ಪಾತ್ರಕ್ಕೆ ಈ ಮೊದಲು ಅಮಿರ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ನಿರಾಕರಿಸಿದ್ದರಿಂದ ಆ ಜಾಗಕ್ಕೆ ಜಾಕಿ ಬಂದಿದ್ದಾರೆ.
ವಿನೋದ್ ಛೋಪ್ರಾ ತಮ್ಮ ಸ್ನೇಹಿತನೆಂಬ ಕಾರಣಕ್ಕೆ ಪಾತ್ರ ಮಾಡಲು ಒಪ್ಪಿಕೊಂಡಿರುವುದಾಗಿ ಜಾಕಿ ಹೇಳಿಕೊಂಡಿದ್ದಾರೆ. ಮುಂಬರುವ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾರಂತೆ ಜಾಕಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ