Webdunia - Bharat's app for daily news and videos

Install App

ಅಬ್ಬಾ! ಇರ್ಫಾನ್ ಖಾನ್ ಅವರಿಗೆ ಬಂದಿರುವುದು ಎಂಥ ಖಾಯಿಲೆ ಗೊತ್ತಾ...?

Webdunia
ಶನಿವಾರ, 17 ಮಾರ್ಚ್ 2018 (06:06 IST)
ಮುಂಬೈ : ಈ ಹಿಂದೆ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟ್ವೀಟ್ ಮಾಡಿದ ಖ್ಯಾತ ಬಾಲಿವುಡ ನಟ ಇರ್ಫಾನ್ ಖಾನ್ ಅವರು ಈಗ ತಮಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.


ನಟ ಇರ್ಫಾನ್ ಖಾನ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಅನೇಕ ರೀತಿಯ ಊಹಾಪೋಹಗಳು ಕೇಳಿ ಬಂದಿದ್ದು, ಇದೀಗ ಅವರು ತಾವು ‘ನ್ಯೂರೋಎಂಡೋಕ್ರೀನ್  ಟ್ಯೂಮರ್’ ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು,’ಅನಿರೀಕ್ಷಿತವಾಗಿರುವುದು ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಕಳೆದ ಕೆಲ ದಿನಗಳಿಂದ ನಾನು ಅರಿತಿದ್ದೇನೆ.


ನನಗೆ   ನ್ಯೂರೋಎಂಡೋಕ್ರೀನ್  ಟ್ಯೂಮರ್ ಇದೆ ಎಂಬುದನ್ನು ಅರಿಗಿಸಿಕೊಳ್ಳುವುದು ಕಷ್ಟಕರವಾಗಿದೆ. ಆದರೆ ನನ್ನ ಸುತ್ತಮುತ್ತ ಇರುವವರ ಪ್ರೀತಿ  ಮತ್ತು ಧೈರ್ಯ ಹಾಗೂ ನನ್ನೊಳಗಿರುವ ಪ್ರೀತಿ ಮತ್ತು ಧೈರ್ಯ ನನಗೆ ಭರವಸೆಯನ್ನು ನೀಡಿದೆ. ಈ ಪಯಣ ನನ್ನನ್ನು ದೇಶದ ಹೊರಗೆ ಕರೆದೊಯ್ದಿದೆ. ಎಲ್ಲರಿಗೂ ತಮ್ಮ ಹಾರೈಕೆಗಳನ್ನು ಕಳುಹಿಸುವಂತೆ ಕೋರುತ್ತಿದ್ದೇನೆ. ಹರಿಯ ಬಿಟ್ಟಂತಹ ವದಂತಿಗಳ ಬಗ್ಗೆ ಹೇಳುವುದಾದರೆ ನ್ಯೂರೋ ಯಾವತ್ತೂ ಮೆದುಳಿಗೆ ಸಂಬಂಧಿಸಿದ ವಿಚಾರವಲ್ಲ. ಹಾಗೂ ಗೂಗಲ್ ಮಾಡುವುದು ಸಂಶೋಧನೆಯ ಅತ್ಯಂತ ಸುಲಭ ವಿಧಾನವಲ್ಲ. ನಾನು ಮತ್ತೆ ಹೊಸ ಕಥೆಗಳೊಂದಿಗೆ ಬರುತ್ತೇನೆಂಬ ಆಶಾಭಾವನೆಯಿದೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments