Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಅಜಯ್ ದೇವಗನ್ ಬಗ್ಗೆ ಟಬು ಹೇಳಿದ ಸೀಕ್ರೆಟ್ ಏನು..?

ನಟ ಅಜಯ್ ದೇವಗನ್ ಬಗ್ಗೆ ಟಬು ಹೇಳಿದ ಸೀಕ್ರೆಟ್ ಏನು..?
ಮುಂಬೈ , ಶುಕ್ರವಾರ, 30 ಜೂನ್ 2017 (07:13 IST)
ಬಾಲಿವುಡ್ ನಟಿ ಟಬು ಇನ್ನೂ ಮದುವೆಯಾಗದೇ ಸಿಂಗಲ್ ಆಗಿರುವುದಕ್ಕೆ ನಟ ಅಜಯ್ ದೇವಗನ್ ಕಾರಣವಂತೆ. ಹೀಗಂತ ಸ್ವತ: ಟಬು ತಮ್ಮ ಮನದಾಳದ ಮಾತನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
 
ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿರುವ ನಟಿ ಟಬು, ತನಗೆ ಅಜಯ್ ಒಬ್ಬ ಸಹನಟ ಮಾತ್ರವಲ್ಲ 25 ವರ್ಷಗಳಿಂದ ಒಬ್ಬ ಒಳ್ಳೆಯ ಸ್ನೇಹಿತ. ತಮ್ಮಿಬ್ಬರ ಸ್ನೇಹ ಬಾಂದವ್ಯದ ಬಗ್ಗೆ ಟಬು ಮಾಧ್ಯಮದಲ್ಲಿ ತಿಳಿಸಿದ್ದಾರೆ.
 
ಅಜಯ್, ಟಬು ಅವರ ಸಹೋದರ ಸಂಬಂಧಿ ಸಮೀರ್ ಆರ್ಯಾ ಅವರ ಪಕ್ಕದ ಮನೆಯಲ್ಲಿ ವಾಸವಿದ್ದರಂತೆ ಟಬು ಮತ್ತು ಸಮೀರ್ ಗೆ ಅಜಯ್ ತುಂಬಾ ಅತ್ಮೀಯ ಸ್ನೇಹಿತರಾಗಿದ್ದರಂತೆ.  ಟಬು ಹೇಳೋ ಪ್ರಕಾರ ನಾನು ಯಂಗ್ ಆಗಿದ್ದಾಗ ಸಮೀರ್ ಮತ್ತು ಅಜಯ್ ನನ್ನ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿದ್ದರು. ನಾನು ಹೋದ ಕಡೆಗೆಲ್ಲ ನನ್ನನ್ನು ಹಿಂಬಾಲಿಸುತ್ತಾ ಪತ್ತೆದಾರಿ ಕೆಲಸ ಮಾಡುತ್ತಿದ್ದರು. ಯಾವುದೇ ಹುಡುಗ ನನ್ನ ಜತೆ ಮಾತಾಡಿದರೆ ಸಾಕು, ಅವನನ್ನು ಹೊಡೆದು, ಬೆದರಿಸಿ ಬರುತ್ತಿದ್ದರು. ಇದೇ ಕಾರಣಕ್ಕೆ ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ಹೇಳಿ ನಕ್ಕಿದ್ದಾರೆ. ಅಲ್ಲದೇ ಈಗ ಅಜಯ್ ಗೆ ತಮ್ಮ ತಪ್ಪಿನ ಅರಿವಾಗಿರಬೇಕು ಎಂದು ಹೇಳಿದ್ದಾರೆ. ಒಟ್ಟಲ್ಲಿ ಟಬು ಹೇಳಿಕೆ ನಿಜಕ್ಕೂ ಎಲ್ಲರಿಗೂ ಶಾಕ್ ಜತೆಗೆ ನಗುನೂ ತರಿಸತ್ತೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಜಾ ಟಾಕೀಸ್ ಸೃಜಾಗೆ ಈಗ ಅಭಿಮಾನಿಗಳ ಸಂಘ