Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೃತಿಕ್ ರೋಷನ್ ಕ್ಷಮೆಯಾಚಿಸಬೇಕು: ಕಂಗನಾ ರನೌತ್

ಹೃತಿಕ್ ರೋಷನ್ ಕ್ಷಮೆಯಾಚಿಸಬೇಕು: ಕಂಗನಾ ರನೌತ್
ಮುಂಬೈ , ಶುಕ್ರವಾರ, 1 ಸೆಪ್ಟಂಬರ್ 2017 (14:57 IST)
ಮುಂಬೈ: ಬಿಟೌನ್ ಬೆಡಗಿ ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಾಗ್ತಾರೆ. ಈಗ ಮತ್ತೆ ಹೃತಿಕ್ ರೋಷನ್ ರನ್ನ ಕೆಣಕಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸದ್ಯ `ಸಿಮ್ರನ್’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರೋ ಕಂಗನಾ, ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ತಮ್ಮ ಹಾಗೂ ಹೃತಿಕ್ ನಡುವಿನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ.

ಹೃತಿಕ್ ಗೆ ನನ್ನ ಪರ್ಸನಲ್ ಇಮೇಲ್ ಐಡಿಯ ಪಾಸ್ ವರ್ಡ್ ಗೊತ್ತಿತ್ತು. ಹೀಗಾಗಿ ರಾತ್ರಿ ವೇಳೆ ಲಾಗಿನ್ ಆಗಿ ಅದನ್ನು ದುರುಪಯೋಗ ಮಾಡಿದ್ದಾರೆ. ಈ ವಿಷಯ ಅವರ ತಂದೆ ರಾಕೇಶ್ ಗೆ ತಿಳಿಸಿದಾಗ ಹೆಲ್ಪ್ ಮಾಡುವುದಾಗಿ ಹೇಳಿದ್ದ ಅವರು ಸಹ ಕೊಟ್ಟ ಮಾತು ಮುರಿದಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಹಾಗೂ ಹೃತಿಕ್ ನಡುವೆ ಯಾವ ರೀತಿಯ ಸಂಬಂಧವಿತ್ತು ಮತ್ತು ಪರಿಸ್ಥಿತಿ ಹೇಗೆ ಎದುರಿಸಿದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಷಯವಾಗಿ ಹೃತಿಕ್ ಮತ್ತವರ ತಂದೆ ನನ್ನ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರ ಪ್ರವಾಹ: ಸಂತ್ರಸ್ತರಿಗೆ 25ಲಕ್ಷ ರೂ. ಪರಿಹಾರ ನೀಡಿದ `ದಂಗಲ್’ ಸ್ಟಾರ್