ಕಳೆದ ವಾರ ಸಲ್ಮಾನ್ ತಂಗಿ ಅರ್ಪಿತಾ ಮನೆಯಲ್ಲಿ ಕಳ್ಳತನವಾಗಿತ್ತು. 3.50 ಲಕ್ಷ ರೂಪಾಯಿ ಕಳ್ಳತನ ವಾಗಿರುವುದರ ಬಗ್ಗೆ ವರದಿಯಾಗಿತ್ತು. 10 ಗ್ರಾಂ ಬಂಗಾರದ ನಾಣ್ಯ. ಡಿಸೈನರ್ ಬಟ್ಟೆ, ಸುಗಂಧ ದ್ರವ್ಯ ವಸ್ತುಗಳನ್ನು ದರೋಡೆ ಮಾಡಲಾಗಿತ್ತು.
ಮನೆ ಕೆಲಸಗಾರ್ತಿ ಆಸ್ಫಾ ಖಾನ್ ಮೇಲೆ ಕೇಸ್ ದಾಖಲಾಗಿತ್ತು. ಮೂರು ದಿನಗಳ ಬಳಿಕ ಆರೋಪಿ ಪೊಲೀಸ್ರಿಂದ ಅರೆಸ್ಟ್ ಆಗಿರುವುದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಮನೆಯಲ್ಲಿದ್ದ ಬಂಗಾರದ ನಾಣ್ಯ, ಡಿಸೈನರ್ ಬಟ್ಟೆಗಳನ್ನು ಇದುವರೆಗೂ ಪತ್ತೆಯಾಗಿಲ್ಲ. ಆದ್ರೆ ಮನೆ ಕೆಲಸದಾಕೆ ಇದೆಲ್ಲಾವನ್ನು ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿ ಮನೆ ಕೆಲಸದಾಕೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅರ್ಪಿತಾ ಖಾನ್ ಜತೆಗೆ ಮನೆ ಕೆಲಸದವಳು ಇರುತ್ತಿದ್ದಳು. ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಳು. ಕಳ್ಳತನವಾದ ದಿವಸ ಮನೆಯಲ್ಲಿ ಅರ್ಪಿತಾ ಇರಲಿಲ್ಲವಂತೆ. ಮನೆಯಲ್ಲಿದ್ದ ನಗದು ಹಾಗೂ 2.25 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ