ಸ್ವಚ್ಛಭಾರತ ಕಾರ್ಯಕ್ರಮಕ್ಕೆ ರಾಯಭಾರಿಯಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ಕೇಂದ್ರ ಸರಕಾರ ನೇಮಕಮಾಡಿದೆ. ಸ್ವಚ್ಛಭಾರತದ ಅಭಿಯಾನದ ಬಗ್ಗೆ ರೇಡಿಯೋ, ಟಿವಿಗಳ ಮೂಲಕ ಅವರು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
ಸ್ವಚ್ಛಭಾರತ ಅಭಿಯಾನದ ಭಾಗವಾಗಿ ಇನ್ನು ಮುಂದೆ ಜಾಗ್ರತೆ ಮೂಡಿಸುವ ಪೋಸ್ಟರ್ಗಳು ಭಾರತದಾದ್ಯಂತ ಕಾಣಿಸಲಿವೆ. ಸ್ವಚ್ಛಭಾರತ ಮಿಷನ್ ಗುರಿಯನ್ನು ತಲುಪಲು ಸೆಲೆಬ್ರಿಟಿಗಳನ್ನು ರಾಯಭಾರಿಯಾಗಿ ನೇಮಿಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ, ಸ್ವಚ್ಛಭಾರತ ನಿರ್ದೇಶಕ ಪ್ರವೀಣ್ ಪ್ರಕಾಶ್ ತಿಳಿಸಿದ್ದಾರೆ.
2019ಕ್ಕೆ ಭಾರತದಲ್ಲಿ ಬಯಲು ಶೌಚಾಲಯ ಮುಕ್ತ ದೇಶವಾಗಿ ಭಾರತವನ್ನು ರೂಪಿಸುವುದೇ ಸ್ವಚ್ಛಭಾರತದ ಆಶಯ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿ ಮೂಲಕ ಸ್ವಚ್ಛಭಾರತ ಅಭಿಯಾನಕ್ಕೆ ಇನ್ನಷ್ಟು ಪ್ರಚಾರ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.