ಕೊನೆಗೂ ಬಾಲಿವುಡ್`ನ ತಾರಾ ಜೋಡಿ ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ತಮ್ಮ ದಾಂಪತ್ಯಕ್ಕೆ ಕಾನೂನು ಮೂಲಕವೇ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಈ ತಾರಾ ಜೋಡಿಗೆ ವಿಚ್ಛೇದನಾ ಮಂಜೂರು ಮಾಡಿದೆ. ಈ ಮೂಲಕ ಅರ್ಬಾಸ್ ಮತ್ತು ಮಲೈಕಾ ಅರೋರಾ ನಡುವಿನ 18 ವರ್ಷಗಳ ದಾಂಪತ್ಯ ಇಂದು ಕೊನೆಗೊಂಡಿದೆ.
ಕಳೆದ ನವೆಂಬರ್`ನಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕಾಗಿ ಕೋರ್ಟ್`ಗೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಿನ್ನೆಯೂ ಸಹ ಪುತ್ರ ಅರ್ಹಾನ್ ಜೊತೆ ಜಸ್ಟಿನ್ ಬೈಬರ್ ಸಂಗೀತ ಕಛೇರಿಗೆ ಬಂದಿದ್ದರು. ಒಂದೇ ಕಾರಿನಲ್ಲಿ ತೆರಳಿ ವಿಚ್ಛೇದನಾ ಪಡೆದಿದ್ದಾರೆ.
ಮಗ ಅರ್ಹಾನ್ ಮಲೈಕಾ ಜೊತೆಗೇ ಇರಲಿದ್ದು, ಅರ್ಬಾಸ್`ಗೆ ಮಗನನ್ನ ಭೇಟಿಮಾಡುವ ಹಕ್ಕನ್ನ ಕೋರ್ಟ್ ನೀಡಿದೆ.ವಿಚ್ಛೇದನಾ ಪಡೆದ ಬಳಿಕ ನಟಿ ಮಲೈಕಾ ಅರೋರಾ ಗಳಗಳನೆ ಅತ್ತ ಬಗ್ಗೆ ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ