ಇದುವಗೂ ಒಂಟಿಯಾಗಿ ಜೀವಿಸಿದ್ದು ಆನಂದದಾಯಕವಾಗಿದೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ. ಬಾಬಾ ರಾಮ್ ದೇವ್, ಪ್ರಧಾನಿ ಮೋದಿ, ಸಲ್ಮಾನ್ ಖಾನ್...ಇವರೆಲ್ಲಾ ಬ್ರಹ್ಮಚಾರಿಗಳು. ಅವರನ್ನು ನೋಡಿ ನಾನು ಸಹ ಹಾಗೆಯೇ ಇರಬೇಕೆಂದಿದ್ದೇನೆ.
ಆದರೆ ನನ್ನ ಸಹಚರರು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಮ್ಮೆ ರಾಖಿ ಕಾ ಸ್ವಯಂವರ್ ರಿಯಾಲಿಟಿ ಶೋ ನಿರ್ವಹಿಸಲಿದ್ದಾರೆ ಎಂದಿದ್ದಾರೆ. ರಾಖಿ ಸಾವಂತ್ ಈ ಹಿಂದೆ ಕ್ರೇಜಿ 4, 1920 ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಹಿಂದೊಮ್ಮೆ 2009ರಲ್ಲಿ ನಿರ್ವಹಿಸಿದ ಇದೇ ಶೋನ ಮೊದಲ ಸೀಸನ್ನಲ್ಲಿ ಕೆನಡಾದ ಉದ್ಯಮಿ ಈಲೇಶ್ ಪರುಜನ್ವಾಲಾರನ್ನು ತನ್ನ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣ ಇಬ್ಬರೂ ದೂರವಾದರು.
ಧನವಂತ, ಕಷ್ಟಪಡುವವ, ನಾಲ್ಕು ಮಂದಿಯ ಜತೆ ಓಡಾಡುವವ, ಶಕ್ತಿವಂತ ವ್ಯಕ್ತಿ ಸಿಗುವವರೆಗೂ ತಾನು ಮದುವೆಯಾಗಲ್ಲ ಎಂದು ಇತ್ತೀಚೆಗೆ ರಾಖಿ ಹೇಳಿದ್ದಾರೆ. ಆ ರೀತಿಯ ಯುವಕನನ್ನು ಹುಡುಕರು ಈಗ ಮತ್ತೊಮ್ಮೆ ರಾಖಿ ಕಾ ಸ್ವಯಂವರ ಆಯೋಜಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.