ಆಂಧ್ರಪ್ರದೇಶ : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ರಾಖಿ ಹಬ್ಬದಂದು ಹೆಣ್ಣು ಮಕ್ಕಳು ತಮ್ಮ ಅಣ್ಣ- ತಮ್ಮಂದಿರಿಗೆ ರಾಖಿ ಬದಲು ವಿಶೇಷವಾದ ಉಡುಗೊರೆಯೊಂದನ್ನು ನೀಡಲು ಹೇಳಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರಿ ಕವಿತಾ ರಾಖಿ ಹಬ್ಬವನ್ನು ಸ್ಮರಣೀಯ ಗೊಳಿಸುವ ಉದ್ದೇಶದಿಂದ ಸಿಸ್ಟರ್ಸ್ ಫಾರ್ ಚೇಂಜ್ ಆಂದೋಲನ ಆರಂಭಿಸಿದ್ದರು. ಈ ಆಂದೋಲನಕ್ಕೆ ನಟ ಮಹೇಶ್ ಬಾಬು ಅವರು ಕೂಡ ಕೈಜೋಡಿಸಿದ್ದಾರೆ.
ಹಾಗೇ ದೇಶದಲ್ಲಿ 'ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದ ಪ್ರತಿದಿನವೂ 15 ರಿಂದ 20 ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಲ್ಮೆಟ್ ಧರಿಸದ ತಪ್ಪಿನಿಂದಾಗಿ, ಸಾವಿರಾರು ಕುಟುಂಬ ತಮ್ಮ ಸಂತೋಷವನ್ನೇ ಕಳೆದುಕೊಂಡಿವೆ. ಇದು ಬದಲಾವಣೆಯ ಸಮಯ. ಈ ಬಾರಿಯ ರಕ್ಷಾಬಂಧನದ ದಿನ ನಿಮ್ಮ ಸಹೋದರರಿಗೆ ಹೆಲ್ಮೆಟ್ ಗಿಫ್ಟ್ ಕೊಡಿ' ಅಂತಾ ಮಹೇಶ್ ಬಾಬು ಮನವಿ ಮಾಡಿದ್ದಾರೆ. ಈ ಮನವಿಗೆ ಸಾವಿರಾರು ಮಂದಿ ಹೆಣ್ಣು ಮಕ್ಕಳು ಸ್ಪಂದಿಸಿದ್ದು ತಮ್ಮ ಸೋದರರಿಗೆ ರಾಖಿ ಬದಲಾಗಿ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ