ಸಾಮಾನ್ಯವಾಗಿ ಕಾಜೋಲ್ ಮತ್ತು ಶಾರೂಖ್ ಅಭಿನಯದ ಚಿತ್ರಗಳು ಯಶಸ್ಸನ್ನು ಕಂಡಿವೆ. ತುಂಬಾ ಇಷ್ಟವಾದ ಜೋಡಿಗಳಲ್ಲಿ ಇದು ಸಹಿತ ಒಂದಾಗಿದ್ದು, ಪ್ರಸ್ತುತ ಇವರಿಬ್ಬರು ರೋಹಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನನಗೆ ಶಾರುಖ್ ಮೇಲೆ ಎಂದಿಗೂ ಕೋಪವಿಲ್ಲ, ಬದಲಿಗೆ ಸಿಟ್ಟು ಬಂದಿದ್ದು ಆದಿತ್ಯ ಚೋಪ್ರ ಮೇಲೆ ಎಂದಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಮತ್ತು ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಲ್ಗೇರಿಯಾದಲ್ಲಿ ಒಂದೇ ಟೇಬಲ್ ನಲ್ಲಿ ಕುಳಿತು ಪಾನಗೋಷ್ಠಿಯಲ್ಲಿ ನಿರತರಾಗಿರುವ ಫೋಟೋ ಈಗ ಎಲ್ಲೆಡೆ ಸಂಚಲನ ಉಂಟು ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಅಜಯ್ ಅವರು ಹೇಳಿದ್ದು ಏನು ಗೊತ್ತೇ ? ನಾನು ಮತ್ತು ಶಾರುಖ್ ಸಹೋದ್ಯೋಗಿಗಳಷ್ಟೇ, ಉತ್ತಮ ಸ್ನೇಹಿತರಲ್ಲ. ಅನೇಕ ವರದಿಗಳು ಈ ತಾರ ಜೋಡಿಯ ಕೋಪ ತಣ್ಣಗಾಗಿದೆ ಎಂದು ಹೇಳಿದ್ದವು. ಅದಕ್ಕೆ ಈ ಉತ್ತರ ನೀಡಿದ್ದಾರೆ ನಟ.
ನಾವು ಎಲ್ಲಿಯೇ ಭೇಟಿಯಾದರೂ ಈ ರೀತಿಯ ವಾತಾವರಣ ಇರುತ್ತದೆ. ನಾವಿಬ್ಬರು ಉತ್ತಮ ಸ್ನೇಹಿತರಲ್ಲ, ಬದಲಿಗೆ ಸಹೋದ್ಯೋಗಿಗಳು ಎಂದಿದ್ದಾರೆ ಕಾಜೋಲ್ ಪತಿ ಅಜಯ್.
ಇವರಿಬ್ಬರ ನಟನೆಯ ಚಿತ್ರಗಳ ಬಿಡುಗಡೆಗೆ ಸಂಬಂಧಪಟ್ಟಂತೆ ಗೊಂದಲ ಉಂಟಾಗಿತ್ತು. ಅಂದಿನಿಂದ ಅಜಯ್ ಅವರು ಶಾರುಖ್ ಬಗ್ಗೆ ಕೋಪಗೊಂಡಿದ್ದಾರೆ ಎನ್ನುವುದು ಮಾಧ್ಯಮಗಳ ಮುಖ್ಯ ಸುದ್ದಿಗಳಲ್ಲಿ ಒಂದಾಗಿತ್ತು. ನಮ್ಮಿಬ್ಬರ ನಡುವೆ ಈಗ ಯಾವುದೇ ಭಿನ್ನತೆ ಭೇದ ಭಾವ ಇಲ್ಲ. ಆದಿಯ ಬಗ್ಗೆಯೂ ಸಹಿತ ಕೋಪವಿಲ್ಲ ಎಂದಿದ್ದಾರೆ ಅಜಯ್.
ಸುಖಾಸುಮ್ಮನೆ ಮಾಧ್ಯಗಳು ನಮ್ಮ ಬಗ್ಗೆ ಬರೆಯುತ್ತಿದ್ದಾರೆ ಎಂದು ಸಹಿತ ತಿಳಿಸಿದ್ದಾರೆ. ಅದು ಸತ್ಯ ಬಿಡಿ ಗಾಸಿಪ್ ಕಾಲಂ ತುಂಬಲು ಏನಾದರೊಂದು ಮಸಾಲೆ ಇರಲೇ ಬೇಕಲ್ಲ!