ಮುಂಬೈ: ಸಲ್ಮಾನ್ ಖಾನ್ ಮತ್ತು ಭೂಮಿಕಾ ಚಾವ್ಲಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಸೂಪರ್ ಡೂಪರ್ ಹಿಟ್ ಆಗಿದ್ದ ಚಿತ್ರ ತೇರೇ ನಾಮ್. ಇದರ ಎರಡನೇ ಭಾಗ ಮಾಡುವ ಯೋಜನೆ ನಿರ್ದೇಶಕ ಸತೀಶ್ ಕೌಶಿಕ್ ಮನದಲ್ಲಿದೆಯಂತೆ.
2003 ರಲ್ಲಿ ಬಿಡುಗಡೆಯಾದ ತೇರೇ ನಾಮ್ ಎರಡನೇ ಭಾಗ ಮಾಡುವಂತೆ ನಿರ್ದೇಶಕ ಸತೀಶ್ ಗೆ ಟ್ವಿಟರ್ ನಲ್ಲಿ ಅಭಿಮಾನಿಗಳು ಕೇಳಿಕೊಳ್ಳುತ್ತಲೇ ಇರುತ್ತಾರಂತೆ. ಹೀಗಾಗಿ ಸತೀಶ್ ಈ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಆದರೆ ಯಾವಾಗ ಎಂದು ಇನ್ನೂ ನಿರ್ಧರಿಸಿಲ್ಲ ಎನ್ನುತ್ತಾರವರು.
ಇತ್ತೀಚೆಗೆ ಸೂಪರ್ ಹಿಟ್ ಚಿತ್ರಗಳಾದ ತುಮ್ ಬಿನ್, ಕಹಾನಿ, ರಾಕ್ ಆನ್ ಎರಡನೇ ಭಾಗ ಬಂದಿದೆ. ಇದೇ ರೀತಿ ತೇರೇ ನಾಮ್ ಕೂಡಾ ನಿರ್ಮಿಸಬಾರದೇಕೆ ಎಂಬುದು ನಿರ್ದೇಶಕರ ಚಿಂತನೆ. ಆದರೆ ಮೊದಲ ಭಾಗದಂತೆಯೇ ಯಶಸ್ವಿಯಾಗುತ್ತದೆಂದು ಹೇಳಲಾಗದು ಎಂದೂ ನಿರ್ದೇಶಕರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ