ಮುಂಬೈ:ಮಗಳು ಸಾರಾ ಆಲಿ ಖಾನ್ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದು ತನಗೆ ಇಷ್ಟವಿಲ್ಲ ಎಂದು ಈ ಹಿಂದೆ ನಟ ಸೈಫ್ ಅಲಿಖಾನ್ ಹೇಳಿಕೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಮಗಳ ಚಿತ್ರರಂಗ ಪ್ರವೇಶಕ್ಕೆ ತಾಯಿ ಅಮೃತ ಸಿಂಗ್ ಪ್ರೋತ್ಸಾಹವಿದೆ.
ಒಟ್ಟಿನಲ್ಲಿ ಸಾರಾ ಆಲಿ ಖಾನ್ ಕೊನೆಗೂ ಅಭಿಷೇಕ್ ಕಪೂರ್‌ರ ಕೇದಾರನಾಥ ಸಿನಿಮಾ ಮೂಲಕ ಸುಶಾಂತ್ ಸಿಂಗ್ ರಜ್‌ಪೂತ್ ಜೊತೆ ಎಂಟ್ರಿ ನೀಡಲಿದ್ದಾಳೆ.
ಆದರೆ ಈ ಹಿಂದೆ ಸಂದರ್ಶನವೊಂದರಲ್ಲಿ ಸಾರಾ ಬಾಲಿವುಡ್‌ಗೆ ಎಂಟ್ರಿ ನೀಡುವ ಬಗ್ಗೆ ಸೈಫ್ ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಸೈಫ್ ಈ ರೀತಿಯ ಕಮೆಂಟ್ ನೀಡಿರುವುದರಿಂದ ಕೋಪಗೊಂಡ ಸೈಫ್ ಮಾಜಿ ಪತ್ನಿ ಅಮೃತಾ, ಸೈಫ್‌ಗೆ ಕರೆ ಮಾಡಿ ಚೆನ್ನಾಗಿ ಬೈದಿದ್ದಾರಂತೆ. ಅಮೃತ ಕರೆ ಬಂದದ್ದೇ ತಡ ಸೈಫ್ ಇನ್ನೊಂದು ಸುದ್ದಿಗೋಷ್ಠಿ ಕರೆದು, ತಾನು ಆ ರೀತಿ ಹೇಳಿಲ್ಲ. ಸಾರಾ ಸಿನಿಮಾಕ್ಕೆ ಬಂದಿರುವುದು ನನಗೆ ಇಷ್ಟ. ಆಕೆ ಫಿಲ್ಮ್ ಹಿನ್ನೆಲೆ ಇರುವ ಫ್ಯಾಮಿಲಿಯಿಂದ ಬಂದಿರುವಾಕೆ. ಆಕೆಗೆ ಇಷ್ಟವಾದ ರಂಗವನ್ನೇ ಆರಿಸಿದ್ದಾಳೆ, ನಾನು ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ..