ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಣವೀರ್ ಪೋಷಕರಿಂದ ಭರ್ಜರಿ ಉಡುಗೊರೆಯನ್ನು ಪಡೆದಿರುವ ದೀಪಿಕಾ ಇದೀಗ ರಣವೀರ್ ಅವರ ಅಜ್ಜಿಯನ್ನು ಭೇಟಿ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರುವುದಂತೂ ಗ್ಯಾರಂಟಿ ಅನಿಸುತ್ತಿದೆ.
ಮುಂಬೈಯಲ್ಲಿರುವ ರಣವೀರ್ ಸಿಂಗ್ ಅವರ ಅಜ್ಜಿಯನ್ನು ಭೇಟಿ ಮಾಡಿದ ದೀಪಿಕಾ ಅಲ್ಲಿ ಸಾಕಷ್ಟು ಹೊತ್ತು ಕಳೆದು ಹಿಂತಿರುಗಿದ್ದಾರೆ. ಗೋವಾದಲ್ಲಿ ಈಗಾಗಲೇ ದೀಪಿಕಾ, ರಣವೀರ್ ಮನೆಯನ್ನೂ ಖರೀದಿಸಿದ್ದಾರಂತೆ. ಸದ್ಯದಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಬಿ-ಟೌನ್ ನಲ್ಲಿ ಕೇಳಿಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ