ಮುಂಬೈ: ನೋಟು ನಿಷೇಧದಿಂದಾಗಿ ಜನ ಥಿಯೇಟರ್ ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹೊಸದಾಗಿ ಬಿಡುಗಡೆಯಾದ ಸಿನಿಮಾಗಳು ದುಡ್ಡು ಮಾಡುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ವಾರ ತೆರೆ ಕಂಡ ಫೋರ್ಸ್ 2 ಹಿಂದಿ ಸಿನಿಮಾದ ನಾಯಕ ಜಾನ್ ಅಬ್ರಹಾಂ ಮತ್ತು ನಾಯಕಿ ಸೊನಾಕ್ಷಿ ಸಿನ್ಹಾ ಜನರನ್ನು ಸೆಳೆಯಲು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ತಮ್ಮ ಟ್ವಿಟರ್ ಪೇಜ್ ನಲ್ಲಿ ಜನರನ್ನು ಚಿತ್ರ ನೋಡಲು ಬರುವಂತೆ ಆಹ್ವಾನಿಸುತ್ತಿದ್ದ, ಹೊಸ ಆಫರ್ ಗಳನ್ನು ನೀಡುತ್ತಿದ್ದಾರೆ. ಪೇಟೈಮ್ ವೆಬ್ ಸೈಟ್ ನಲ್ಲಿ ಹಣ ಪಾವತಿಸಿ ಸಿನಿಮಾ ನೋಡಲು ಪ್ರೋತ್ಸಾಹಿಸುತ್ತಿದ್ದಾರೆ. ಎರಡು ಸಿನಿಮಾ ಟಿಕೆಟ್ ತೆಗೆದುಕೊಂಡರೆ 50 ಶೇಕಡಾ ಹಣ ಮರಳಿಸುವುದಾಗಿ ಹೇಳಿದ್ದಾರೆ. ಹೀಗಾದರೂ ಜನ ಥಿಯೇಟರ್ ಗೆ ಬರಲಿ ಎನ್ನುವ ಪ್ರಯತ್ನ ಇವರದ್ದು.
ಇತ್ತೀಚೆಗೆ ಬಿಡುಗಡೆಯಾದ ಫರ್ಹಾನ್ ಅಖ್ತರ್ ಅವರ ರಾಕ್ ಆನ್ 2 ಸಿನಿಮಾ ನೋಟು ನಿಷೇಧದಿಂದ ನಷ್ಟ ಅನುಭವಿಸಿತ್ತು. ಇದೇ ಗತಿ ತಮ್ಮ ಸಿನಿಮಾಕ್ಕೂ ಬರದಿರಲಿ ಎನ್ನುವ ಕಾರಣಕ್ಕೆ ಜಾನ್ ಈ ಪ್ರಯತ್ನ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ