ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಗರ್ಭಿಣಿಯಾಗಿರುವಾಗ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.
ಈ ಪುಸ್ತಕಕ್ಕೆ ಅವರು ಪ್ರೆಗ್ನೆನ್ಸಿ ಬೈಬಲ್ ಎಂದು ಟೈಟಲ್ ಇಟ್ಟಿದ್ದರು. ಆದರೆ ಅದುವೇ ಈಗ ಅವರಿಗೆ ಮುಳುವಾಗಿದೆ. ಪುಸ್ತಕದ ಟೈಟಲ್ ನಲ್ಲಿ ಬೈಬಲ್ ಎಂದು ಬರೆದಿರುವುದು ಕ್ರಿಶ್ಚಿಯನ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಈ ಸಂಬಂಧ ಕರೀನಾ ವಿರುದ್ಧ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘ ದೂರು ನೀಡಿದೆ. ಕ್ರಿಶ್ಚಿಯನ್ನರ ಪವಿತ್ರ ಗ್ರಂಥ ಬೈಬಲ್ ಹೆಸರನ್ನು ಪ್ರೆಗ್ನೆನ್ಸಿ ಕುರಿತ ಪುಸ್ತಕಕ್ಕೆ ಇಟ್ಟಿರುವುದಕ್ಕೆ ಮಹಾಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.