ಮುಂಬೈ: ಏ ದಿಲ್ ಹೇ ಮುಷ್ಕಿಲ್ ಸಿನಿಮಾ ಏನೆಲ್ಲಾ ಮಾಡಿದೆ ನೋಡಿ. ನಿರ್ಮಾಪಕರು ಸೈನಿಕರ ಯೋಗಕ್ಷೇಮಾಭಿವೃದ್ಧಿ ನಿಧಿಗೆ 5 ಕೋಟಿ ಕೊಡಲು ಒಪ್ಪಿರುವುದು ಮತ್ತು ಪಾಕ್ ಕಲಾವಿದರನ್ನು ಇನ್ನು ಸಿನಿಮಾದಲ್ಲಿ ಬಳಸುವುದಿಲ್ಲ ಎಂಬ ವಿಚಾರದಲ್ಲಿ ಬಾಲಿವುಡ್ ಇಬ್ಬಾಗವಾಗಿದೆ.
“ಪಾಕಿಸ್ತಾನ ಕಲಾವಿದರನ್ನು ಬಳಸಿಕೊಂಡ ಸಿನಿಮಾ ನಿರ್ಮಾಪಕರು ಸೈನಿಕರ ನಿಧಿಗೆ 5 ಕೋಟಿ ರೂ. ನೀಡಬೇಕು ಎಂಬುದು ನಿಜಕ್ಕೂ ಸರಿಯಲ್ಲ. ದಾನ ಮಾಡುವುದು ಒತ್ತಾಯ ಪೂರ್ವಕವಾಗಿರಬಾರದು. ಹೃದಯಪೂರ್ವಕವಾಗಿರಬೇಕು” ಎಂದು ನಿರ್ಮಾಪಕ ಅಶೋಕೆ ಪಂಡಿತ್ ಹೇಳಿದ್ದಾರೆ.
ದೇಶದ ಗೌರವದ ಪ್ರತೀಕವಾಗಿರುವ ಸೈನಿಕರ ಹೆಸರಲ್ಲಿ ಹಣ ಸೂರೆ ಮಾಡುತ್ತಿದೆ ಎಂದು ನಟಿ ತಾರಾ ದೇಶಪಾಂಡೆ ಎಂಎನ್ಎಸ್ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ನಿರ್ಮಾಪಕಿ ಕಂ ನಟಿ ಪೂಜಾ ಭಟ್ ಕೂಡಾ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಅಭಯ್ ಡಿಯೋಲ್ ಅವರು ಮಾತ್ರ ಇದನ್ನು ಬೆಂಬಲಿಸಿದ್ದಾರೆ. “ಪಾಕಿಸ್ತಾನಕ್ಕೆ ಸಹಕಾರಿಯಾಗುವಂತಹ ಎಲ್ಲವನ್ನೂ ನಿಷೇಧಿಸಬೇಕು. ಅದು ಸಿನಿಮಾ ಮಾತ್ರವಲ್ಲ, ರಫ್ತು, ಆಮದು ಎಲ್ಲವೂ ಇದರಲ್ಲಿ ಒಳಗೊಳ್ಳಬೇಕು” ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ