42ರ ಹರೆಯಕ್ಕೆ ಕಾಲಿಟ್ಟ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ಗೆ ನಿನ್ನೆ ಹುಟ್ಟುಹಬ್ಬದ ವಿಶೇಷ ಸಂಭ್ರಮ. ಅವರ ತಂದೆ ಅಮಿತಾಭ್ ಬಚ್ಚನ್ ಅವರಿಂದ ಹಿಡಿದು ಆತ್ಮೀಯ ಸ್ನೇಹಿತೆ ಫರಾಹ್ ಖಾನ್ ಮತ್ತು ಫರ್ಹಾನ್ ಅಖ್ತರ್ ರವರೆಗೆ ಬಾಲಿವುಡ್ನ ಪ್ರಸಿದ್ಧ ಸಿನಿತರೆಗಳು ಟ್ವಿಟ್ಟರ್ನಲ್ಲಿ 42 ನೇ ಹುಟ್ಟುಹಬ್ಬದಂದು ಅಭಿಷೇಕ್ ಬಚ್ಚನ್ ಅವರಿಗೆ ಶುಭಾಶಯ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು "#HBDAbhishekBachchan.. ದೇಶದಿಂದ ಹೊರಗಿರುವ ಅಭಿಷೇಕ್ಗೆ ಹುಟ್ಟುಹಬ್ಬದ ಶುಭಾಶಯಗಳು.. !! ''ಹಿಂದೊಮ್ಮೆ ತಂದೆಯ ಕೈ ಹಿಡಿದು ನಡೆಯಲು ಕಲಿತ ಮಗ ಈಗ ತಂದೆಯ ಕೈ ಹಿಡಿದು ನಡೆಸುತ್ತಾನೆ'' ಎಂದು ಮಗನ ಕೆಲವು ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
ಅಮಿತಾಭ್ ಮತ್ತು ನಟಿ-ರಾಜಕಾರಣಿ ಜಯಾ ಬಚ್ಚನ್ ಅವರ ಪುತ್ರ, ವಿಶ್ವ ಸುಂದರಿ ಐಶ್ವರ್ಯ ರೈ ಅವರ ಪತಿ ಅಭಿಷೇಕ್ ಅವರು 2000 ರಲ್ಲಿ ಕರೀನಾ ಕಪೂರ್ ಅವರೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ಚಿತ್ರದ ನಂತರ, ಅವರು ಯುವ, ಗುರು, ಬಂಟಿ ಔರ್ ಬಬ್ಲಿ, ಹ್ಯಾಪಿ ನ್ಯೂ ಇಯರ್, ಸರ್ಕಾರ್ ಮತ್ತು ದೋಸ್ತಾನಾ ಮುಂತಾದ ಹಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.