ಮುಂಬೈ: ನಟಿ ಕಾಜೋಲ್ ಗೆಳೆಯರ ಜತೆ ಪಾರ್ಟಿಯಲ್ಲಿ ಬೀಫ್ ತಿಂದು ಅನುಭವ ಹಂಚಿಕೊಂಡಿದ್ದಾರೆ ಎಂಬ ವಿಡಿಯೋ ನಿನ್ನೆ ಭಾರೀ ಸುದ್ದಿ ಮಾಡಿತ್ತು. ಇಂದು ಅದೆಲ್ಲಾ ಸುಳ್ಳು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಅಷ್ಟಕ್ಕೂ ನಾನು ತಿಂದಿದ್ದು ಕತ್ತೆ ಮಾಂಸ. ಬೀಫ್ ಅಲ್ಲ. ಕತ್ತೆ ಮಾಂಸ ಸೇವನೆ ಅಕ್ರಮವಲ್ಲ ಎಂದು ಕಾಜೋಲ್ ಸ್ಪಷ್ಟನೆ ನೀಡಿದ್ದಾರೆ. ತಾವು ತಿಂದ ಆಹಾರವೂ ಇಷ್ಟೊಂದು ವಿವಾದವೆಬ್ಬಿಸುತ್ತೆ ಅಂತ ಸ್ವತಃ ಕಾಜೋಲ್ ಅಂದುಕೊಂಡಿರಲಿಲ್ಲವೇನೋ.
ಸ್ನೇಹಿತರೊಬ್ಬರ ಮನೆಯಲ್ಲಿ ಕಾಜೋಲ್ ಪಾರ್ಟಿ ಮಾಡಲು ಸೇರಿದ್ದರು. ಅಲ್ಲ ಸ್ನೇಹಿತರು ಮಾಂಸದೂಟ ಮಾಡಿದ್ದರು. ಅದು ಬೀಫ್ ಆಗಿತ್ತು. ಅದನ್ನು ಕಾಜೋಲ್ ಚಪ್ಪರಿಸಿಕೊಂಡು ತಿಂದರು ಎಂದು ವಿಡಿಯೋದಲ್ಲಿ ಹೇಳಲಾಗಿತ್ತು.
ಅದು ಸಂವಹನದ ಕೊರತೆಯಿಂದ ಆದ ತಪ್ಪು. ಇದೊಂದು ಸೂಕ್ಷ್ಮ ವಿಚಾರವಾದ್ದರಿಂದ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ತಿಂದಿದ್ದು ಕಾನೂನು ಪ್ರಕಾರ ಸಮ್ಮತವಾದ ಮಾಂಸದೂಟವನ್ನೇ ಎಂದು ಕಾಜೋಲ್ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ