ಮುಂಬೈ: ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ತಂದೆ, ನಿರ್ದೇಶಕ ಮಹೇಶ್ ಭಟ್ ಗೆ ದುಷ್ಕರ್ಮಿಗಳ ಗುಂಪು ಕರೆ ಮಾಡಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಇಲ್ಲದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದೆ.
ನಿರ್ದೇಶಕ ಮಹೇಶ್ ಭಟ್ ಮತ್ತು ಪುತ್ರಿಗೆ 50 ಲಕ್ಷ ರೂ. ನೀಡುವಂತೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಅನಾಮಿಕ ಗ್ಯಾಂಗ್ ಲೀಡರ್ ಹಣ ನೀಡದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲಿಯಾ ಭಟ್ ಸದ್ಯಕ್ಕೆ ಚಾಲ್ತಿಯಲ್ಲಿರುವ ಬಾಲಿವುಡ್ ನಟಿ. ಶಾರುಖ್ ಜತೆಗೆ ಆಕೆ ಇತ್ತೀಚೆಗೆ ನಟಿಸಿದ್ದ, ಡಿಯರ್ ಜಿಂದಗಿ ಚಿತ್ರ ಸೂಪರ್ ಹಿಟ್ ಆಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.