ಬಾಲಿವುಡ್ ತಾರೆಗಳು ಹಾಲಿವುಡ್ ಅಂಗಳಕ್ಕೆ ಅಡಿಯಿಡುತ್ತಿರುವುದು ಗೊತ್ತೇ ಇದೆ. ಕ್ವಾಂಟಿಕೋ ಮತ್ತು ಬೇವಾಚ್ ಚಿತ್ರಗಳಲ್ಲಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಒಂದು ಕಡೆ, ಇನ್ನೊಂದು ಕಡೆ ಮಸ್ತಾನಿ ದೀಪಿಕಾ ಪಡುಕೋಣೆ xXx ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದೀಗ ಇನ್ನೊಂದು ಬೆಡಗಿ ಅಮೆರಿಕಾಗೆ ಜಿಗಿಯುತ್ತಿದ್ದಾಳೆ. ಆಕೆ ಬೇರಾರು ಅಲ್ಲ ಬಿಪಾಶಾ ಬಸು. ಹಾಗಂತ ಅವರು ಹಾಲಿವುಡ್ ಚಿತ್ರದಲ್ಲಿ ಬಣ್ಣ ಹಚ್ಚುತಿದ್ದಾರೆ ಎಂದು ಭಾವಿಸಬೇಡಿ. ಬಾಲಿವುಡ್ ಬೆಡಗಿಯರಲ್ಲಿ ಮಿಸ್ ಫಿಟ್ನೆಸ್ ಅಂದ್ರೆ ಥಟ್ ಅಂತ ಜ್ಞಾಪಕ ಬರೋದು ಬಿಪಾಶಾ ಬಸು.
ಬಿಪಾಶಾ ಫಿಟ್ನೆಸ್ ಬಗ್ಗೆ ಎರಡು ಡಿವಿಡಿಗಳು ಬಂದಿವೆ. ಲಾಸ್ ಏಂಜಲೀಸ್ನಲ್ಲಿ ಒಂದು ಹೆಲ್ತ್ ವಿಶ್ವವಿದ್ಯಾಲಯದವರು ಫಿಟ್ನೆಸ್ ಕೋರ್ಸ್ಗಳನ್ನು ಕಲಿಸಲು ಬಿಪಾಶಾ ಬಸುಗೆ ಆಹ್ವಾನ ನೀಡಿದ್ದಾರೆ. ಅಲ್ಲಿ ಬಿಪಾಶಾ ವ್ಯಾಯಾಮಕ್ಕೆ ಇರುವ ಪ್ರಾಮುಖ್ಯತೆ, ಕೆಲವೊಂದು ಚಿಕ್ಕಚಿಕ್ಕ ವ್ಯಾಯಾಮಗಳ ಬಗ್ಗೆ ಯೂನಿವರ್ಸಿಟಿಯಲ್ಲಿ ತಿಳಿಸಲಿದ್ದಾರಂತೆ. 2017ರ ಜನವರಿಯಲ್ಲಿ ಈ ಪ್ರಾಜೆಕ್ಟ್ ಸಲುವಾಗಿ ಲಾಸ್ ಏಂಜಲೀಸ್ ಹೊರಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.