ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡು ನ್ಯಾಯಾಂಗ ವಶದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಬುಧವಾರದವರೆಗೆ ಜೈಲೇ ಗತಿಯಾಗಿದೆ.
ಆರ್ಯನ್ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಆದರೆ ಇದರ ಸಂಬಂಧ ಎನ್ ಸಿಬಿ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ಬುಧವಾರದವರೆಗೆ ಸಮಯ ನೀಡಿದೆ.
ಹೀಗಾಗಿ ಅದಾದ ಬಳಿಕ ಎನ್ ಸಿಬಿ ಪ್ರತಿಕ್ರಿಯೆ ಕೇಳಿಕೊಂಡು ಬಳಿಕವಷ್ಟೇ ಜಾಮೀನು ನೀಡಬೇಕೇ, ಬೇಡವೇ ಎಂಬ ಬಗ್ಗೆ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳಲಿದೆ. ಪ್ರತಿಕ್ರಿಯೆ ಕೊಡಲು ಎನ್ ಸಿಬಿ ಸಮಯಾವಕಾಶ ಕೇಳಿರುವುದರಿಂದ ಅಲ್ಲಿಯವರೆಗೆ ಆರ್ಯನ್ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದೆ.