ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಬಾಂಬೆ ಹೈಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ನಿರ್ಮಾಪಕ ಶಕೀಲ್ ನೂರಾನಿ ದತ್ ವಿರುದ್ಧ ದೂರು ಸಲ್ಲಿಸಿದ್ದರು.
ನೂರಾನಿ ಜತೆ 2002 ರಲ್ಲಿ ದತ್ ಸಿನಿಮಾವೊಂದನ್ನು ಮಾಡಲು ಹೊರಟಿದ್ದರು. ಅದರಂತೆ ಚಿತ್ರಕ್ಕೆ ಸಹಿ ಹಾಕಿ ಸಂಭಾವನೆಯನ್ನೂ ಪಡೆದಿದ್ದರು. ಆದರೆ ಅರ್ಧಕ್ಕೆ ಚಿತ್ರ ಬಿಟ್ಟು ತೆರಳಿದ ದತ್ ನಂತರ ಹಣವನ್ನೂ ಮರಳಿಸಿರಲಿಲ್ಲ ಎನ್ನುವುದು ನೂರಾನಿ ದೂರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯ ದತ್ ವಿರುದ್ಧ ವಾರಂಟ್ ಹೊರಡಿಸಿದೆ. ದೂರು ನೀಡಿದ ಮೇಲೆ ತಮಗೆ ಭೂಗತ ಲೋಕದಿಂದ ಬೆದರಿಕೆ ಕರೆ ಬಂದಿದೆ ಎಂದೂ ಅವರು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ