Webdunia - Bharat's app for daily news and videos

Install App

ಅನುಷ್ಕಾ ಶೆಟ್ಟಿ ಹೊಸ ಅವತಾರ...!!

Webdunia
ಬುಧವಾರ, 13 ಫೆಬ್ರವರಿ 2019 (14:01 IST)
ಸುಮಾರು ಒಂದು ವರ್ಷದ ನಂತರ ಅನುಷ್ಕಾ ತಮ್ಮ ಹೊಸ ಫಿಟ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದ್ದಾರೆ. ತೆಲುಗಿನ ಭಾಗಮತಿ ಚಿತ್ರದಲ್ಲಿ ಇವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸೋಮವಾರ ಅನುಷ್ಕಾ ಅವರ ಹೊಸ ಫಿಟ್ ಅವತಾರದಲ್ಲಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಹೋಲಿಸ್ಟಿಕ್ ಪೌಷ್ಟಿಕಾಂಶವಾದಿ ಲುಕ್ ಕೌಂಟಿನೋ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅನುಷ್ಕಾ ಅವರ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ವಿಶೇಷವಾದ ಕಾರಣಕ್ಕಾಗಿ ಅನುಷ್ಕಾ ಅವರೊಂದಿಗೆ ಸಹಭಾಗಿಯಾಗುವುದಾಗಿ ಬಹಿರಂಗಪಡಿಸಿದ್ದಾರೆ. "ನಾವು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇವೆ. ದೇಶದ ಆರೋಗ್ಯವನ್ನು ಬದಲಾಯಿಸುವುದು, ತಡೆಗಟ್ಟುವಲ್ಲಿ ಬಂಡವಾಳವನ್ನು ಪ್ರೋತ್ಸಾಹಿಸುವುದು ಮತ್ತು ಜೀವನಶೈಲಿಯನ್ನು ಹೊಸ ಧರ್ಮವಾಗಿ ಮತ್ತು ದಿವ್ಯಔಷಧವಾಗಿ ಬಳಸುವುದು ನಮ್ಮ ಗುರಿಯಾಗಿದೆ. ನಾವು 'ಆರೈಕೆ' ಎಂಬ ಪದವನ್ನು 'ಆರೋಗ್ಯ ರಕ್ಷಣೆ' ಎಂದು ಕರೆಯಲು ಪ್ರಯತ್ನಿಸುತ್ತೇವೆ" ಎಂದು ಲುಕ್ ಕೌಂಟಿನೋ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅನುಷ್ಕಾ ಅವರೊಂದಿಗೆ ತಾವಿರುವ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.
ಸೈಜ್ ಜೀರೋ ಚಿತ್ರದಲ್ಲಿ ಬೊಜ್ಜಿನಿಂದ ಬಳಲುತ್ತಿರುವ ಹುಡುಗಿಯ ಪಾತ್ರದಲ್ಲಿ ಅಭಿನಯಿಸಲು ತಮ್ಮ ತೂಕವನ್ನು ಹೆಚ್ಚಿಸಿಕೊಂಡಾಗಿನಿಂದ ಅನುಷ್ಕಾ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳಲು ಕಷ್ಟವನ್ನು ಎದುರಿಸುತ್ತಿದ್ದರು. ಅವರ ಅಭಿಮಾನಿಗಳಿಂದ ಈ ಕುರಿತಾಗಿ ಹಲವು ದೂರುಗಳೂ ಕೇಳಿಬಂದಿದ್ದವು. ಬಹಳ ಹಿಂದೆಯೇ ಅವರು ತೂಕವನ್ನು ಕಳೆದುಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ ಎನ್ನುವ ವದಂತಿಗಳೂ ಸಹ ಕೇಳಿ ಬಂದಿದ್ದವು. ಅದೇನೇ ಇದ್ದರೂ ಈಗಿನ ಅನುಷ್ಕಾ ಅವರ ಈ ಫಿಟ್ ಲುಕ್ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿರುವುದಂತೂ ಸುಳ್ಳಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments