Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಹಮಾರೆ ಬಾರಹ್' ಸಿನಿಮಾಕ್ಕೆ ಮತ್ತೆ ಹಿನ್ನಡೆ: ನಾಳೆ ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೆ ಸುಪ್ರೀಂಕೋರ್ಟ್ ತಡೆ

Hamare Barah

Sampriya

ನವದೆಹಲಿ , ಗುರುವಾರ, 13 ಜೂನ್ 2024 (14:38 IST)
Photo Courtesy X
ನವದೆಹಲಿ: ಬಿಡುಗಡೆಗೆ ಮುನ್ನ ಭಾರೀ ಸದ್ದು ಮಾಡಿದ್ದ ಅನ್ನು ಕಪೂರ್ ಅವರ ಸಿನಿಮಾ 'ಹಮಾರೆ ಬಾರಹ್' ಬಿಡುಗಡೆಗೆ ಮತ್ತೆ ತಡೆ ಎದುರಾಗಿದೆ.

ಇಸ್ಲಾಂ ಧರ್ಮದ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂಬ ಆರೋಪಗಳ ಮೇಲೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಸಿನಿಮಾ ಜೂನ್‌ 14ರಂದು ಬಿಡುಗಡೆಯಾಗಬೇಕಿತ್ತು.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠವು ಅರ್ಜಿದಾರ ಅಜರ್ ಬಾಷಾ ತಾಂಬೋಲಿ ಪರ ವಕೀಲ ಫೌಜಿಯಾ ಶಕೀಲ್ ಅವರು ಸಲ್ಲಿಸಿದ್ದ ವಿವರಣೆಗಳನ್ನು ಮತ್ತು ವಾದಗಳನ್ನು ಗಮನಿಸಿ ಅರ್ಜಿಯ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್‌ಗೆ ಸೂಚಿಸಿತು.

ತ್ರದ ಟ್ರೇಲರ್ ಅನ್ನು ನೋಡಿದ್ದೇವೆ. ಟ್ರೇಲರ್‌ನಲ್ಲಿ ಎಲ್ಲಾ ಆಕ್ಷೇಪಾರ್ಹ ಸಂಭಾಷಣೆಗಳಿವೆ ಎಂದು ನ್ಯಾಯಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಿತು. ಬಾಂಬೆ ಹೈಕೋರ್ಟ್‌ನಿಂದ ಅರ್ಜಿ ಇತ್ಯರ್ಥವಾಗುವವರೆಗೆ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲಾಗಿದೆ.

ಕಳೆದ ವಾರ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ತಡೆ ನೀಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪಿತಸ್ಥರಿಗೆ ರಾಜಮರ್ಯಾದೆ ಕೊಡಬಾರದು; ಕಠಿಣ ಶಿಕ್ಷೆ ಆಗಲಿ ಎಂದ ಇಂದ್ರಜಿತ್‌ ಲಂಕೇಶ್‌