ಮುಂಬೈ: ಒಂದು ವೇಳೆ ಸಿನಿಮಾಕ್ಕೆ ಬರದಿದ್ದರೆ ಅಮೀರ್ ಖಾನ್ ಏನಾಗುತ್ತಿದ್ದರು? ಇಂಜಿನಿಯರ್ ಆಗುತ್ತಿದ್ದರಂತೆ. ಅವರ ಕುಟುಂಬದವರ ಆಸೆ ಅದೇ ಆಗಿತ್ತಂತೆ.
ಅವರ ತಂದೆ ಹಾಗೂ ಕುಟುಂಬದವರು ಸಿನಿಮಾ ಜಗತ್ತಿನಲ್ಲಿದ್ದರೂ, ಅಮೀರ್ ಈ ಫೀಲ್ಡ್ ಗೆ ಬರೋದು ಅವರಿಗೆ ಇಷ್ಟವಿರಲಿಲ್ಲ ಎಂದು ಸ್ವತಃ ಅಮೀರ್ ಖಾನ್ ಹೇಳಿಕೊಂಡಿದ್ದಾರೆ.
“ಸಿನಿಮಾ ಜಗತ್ತು ಸುರಕ್ಷಿತವಲ್ಲ ಎಂದು ಅವರಿಗನಿಸುತ್ತಿತ್ತು. ನನ್ನ ತಂದೆ ನಾಸಿರ್ ಹುಸಾನಿ ಕೂಡಾ ಸಿನಿಮಾಕ್ಕೆ ಕಾಲಿಡಬೇಡ ಎನ್ನುತ್ತಲೇ ಇದ್ದರು. ಸಿನಿಮಾದಲ್ಲಿ ಉದ್ಯೋಗ ಭದ್ರತೆ ಇಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು” ಎಂದಿದ್ದಾರೆ ಅಮೀರ್.
ಆದರೆ 10 ನೇ ತರಗತಿಯ ನಂತರ ಮಾಡಿದ 40 ನಿಮಿಷಗಳ ಕಿರು ಚಿತ್ರದ ನಂತರ ಅವರಿಗೆ ಸಿನಿಮಾದಲ್ಲಿ ಉಳಿದುಕೊಳ್ಳುವ ಆಸೆ ಚಿಗುರಿತಂತೆ. ಅದೂ ಮನೆಯವರಿಗೆ ಗೊತ್ತಾಗದಂತೆ ಈ ಕಿರು ಚಿತ್ರದ ಶೂಟಿಂಗ್ ಗೆ ಹೋಗಿದ್ದರಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ