ಮುಂಬೈ: ರಣಬೀರ್ ಕಪೂರ್ ಪ್ರೇಯಸಿ, ನಟಿ ಅಲಿಯಾ ಭಟ್ ಇತ್ತೀಚೆಗಷ್ಟೇ 26 ನೇ ವರ್ಷದ ಬರ್ತ್ ಡೇ ಆಚರಿಸಿಕೊಂಡಿದ್ದರು. ಆ ಬರ್ತ್ ಡೇ ದಿನ ಅಲಿಯಾ ಒಂದೊಳ್ಳೆ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.
ಅಲಿಯಾ ಆ ದಿನ ತಮ್ಮ ಡ್ರೈವರ್ ಮತ್ತು ಸಹಾಯಕಿಗೆ ಮನೆ ಖರೀದಿಸಲು 50 ಲಕ್ಷ ರೂ.ಗಳ ಚೆಕ್ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಡ್ರೈವರ್ ಸುನಿಲ್ ಮತ್ತು ಸಹಾಯಕಿ ಅನಮೋಲ್ ಎಂಬವರು ಅಲಿಯಾ ವೃತ್ತಿ ಜೀವನದ ಆರಂಭದಿಂದಲೂ ಜತೆಗೇ ಇದ್ದರಂತೆ.
ಇದೀಗ ಈ ಇಬ್ಬರಿಗೂ ಮುಂಬೈನಲ್ಲಿ ಸ್ವಂತ ಮನೆಯೊಂದನ್ನು ಮಾಡಿಕೊಳ್ಳಲು ಅಲಿಯಾ 50 ಲಕ್ಷ ರೂ. ನೀಡಿದ್ದಾರೆ ಎನ್ನಲಾಗಿದೆ. ಅದರಂತೆ ಈಗ ಇಬ್ಬರೂ ಹೊಸ ಮನೆ ಬುಕ್ ಮಾಡಿದ್ದಾರಂತೆ. ಸದ್ಯಕ್ಕೆ ನಟಿ ‘ಕಳಂಕ್’ ಸಿನಿಮಾದ ಪ್ರಮೋಷನಲ್ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ