Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್

ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್
ಬೆಂಗಳೂರು , ಗುರುವಾರ, 15 ಜೂನ್ 2017 (13:11 IST)
ಹಿಪ್ಪಿ ಲುಕ್ ನಲ್ಲಿ ಆಂಡಿ: ಐಂದ್ರಿತಾ ಹೊಸ ಗೆಟಪ್
ಬೆಂಗಳೂರು: ಗರುಡ ಚಿತ್ರದಲ್ಲಿ ನಟಿ ಐಂದ್ರಿತಾ ರೇ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಹಿಪ್ಪಿ ರೀತಿಯ ಪಾತ್ರದಲ್ಲಿ ಬೋಹೊ ಚಿಕ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ.
 
ಸಿದ್ಧಾರ್ಥ್ ಮಹೇಶ್‌ ನಾಯಕನಾಗಿ ನಟಿಸುತ್ತಿರುವ ಧನಕುಮಾರ್‌ ನಿರ್ದೇಶನದ ‘ಗರುಡ’ ಸಿನಿಮಾದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಹಿಪ್ಪಿ ರೀತಿ ಪಾತ್ರಕ್ಕೆ ಅನುಗುಣವಾಗಿ ಐಂದ್ರಿತಾ ಕಾಸ್ಟ್ಯೂಮ್‌ ಮತ್ತು ಕೇಶವಿನ್ಯಾಸವೂ ಬದಲಾಗಲಿದೆ. ಐಂದ್ರಿತಾ ಹೊಸ ಅವತಾರ ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
 
ಬಣ್ಣಬಣ್ಣದ ಚಿತ್ತಾರಗಳುಳ್ಳ ದೊಗಲೆ ಟಾಪ್‌ ಮತ್ತು ಜೀನ್ಸ್‌ ಚೆಡ್ಡಿ ಕಾಸ್ಟ್ಯೂಮ್‌ನಲ್ಲಿ ಐಂದ್ರಿತಾ ಮಾದಕ ನೋಟ ಬೀರಿದ್ದಾರೆ. ಅದಕ್ಕೆ ತಕ್ಕಂತೆ ಕೆಂಚುಬಣ್ಣದ ಕೇಶವಿನ್ಯಾಸ ಇನ್ನಷ್ಟು ಗಮನಸೆಳೆಯುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈನಲ್ಲಿ ರಾಜಹಂಸ ಏರಿ ಬರ್ತಿದ್ದಾಳೆ ಪುಟ್ಟ ಗೌರಿ!