Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಚೋಪ್ರಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಚೋಪ್ರಾ
ಮುಂಬೈ , ಸೋಮವಾರ, 3 ಡಿಸೆಂಬರ್ 2018 (07:09 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಗೆಳೆಯ ಅಮೇರಿಕಾದ ಸಿಂಗರ್ ನಿಕ್​ ಜೋನಾಸ್​​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮಧ್ಯೆ ಇದೀಗ ಅವರು ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.

ಹೌದು. ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಹಾಲಿವುಡ್ ನಿಕ್​ ಜೋನಾಸ್​​ ಶನಿವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಮೇದ್‌ ಭವನ್‌ ಅರಮನೆ ಹೋಟೆಲ್‌ನಲ್ಲಿಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಹಾಗೇ ಭಾನುವಾರದಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

 

ಆದರೆ ಶನಿವಾರ ತಮ್ಮ ಮದುವೆ ಬಳಿಕ ಅರಮನೆಯ ಹೋಟೆಲ್ ಆವರಣದಲ್ಲಿ ಪಟಾಕಿ ಸಿಡಿಸುವ ಪ್ರದರ್ಶನ ಏರ್ಪಡಿಸಲಾಗಿತ್ತು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಯಾಕೆಂದರೆ ನಟಿ ಪ್ರಿಯಾಂಕ ಅವರು ಅಸ್ತಮಾ ಅನಾರೋಗ್ಯಕ್ಕೆ ಸಂಬಂಧಿಸಿದ ಜಾಗೃತಿ ಮೂಡಿಸುವ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಆದ್ದರಿಂದ ವಾಯುಮಾಲಿನ್ಯ ತಡೆ ಚಳುವಳಿಯ ಬ್ರಾಂಡ್ ಅಂಬಾಸಿಡರ್ ನೀವೇ ಆಗಿದ್ದು, ನಿಮ್ಮ ಮದುವೆ ಸಮಾರಂಭದಲ್ಲಿಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಿಯಾಂಕ ಅವರನ್ನು ಪ್ರಶ್ನಿಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಶ್- ರಾಧಿಕಾ ಪುತ್ರಿಗೆ ಅಭಿಮಾನಿಗಳು ಇಟ್ಟ ಹೆಸರೇನು ಗೊತ್ತಾ?