ಪುರಿ : ಈ ಹಿಂದೆ ಕ್ರಿಕೆಟರ್ ಶಾಹಿದ್ ಅಫ್ರಿದಿ ಜತೆ ದೈಹಿಕ ಸಂಬಂಧ ಮಾಡಲು ಇಷ್ಟಡುತ್ತೇನೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಕಿರುತೆರೆ ನಟಿ ಮಾಹಿಕ ಶರ್ಮಾ ಅವರು ಪುರಿ ಜಗನ್ನಾಥ ಸ್ವಾಮಿಯ ಪವಿತ್ರ ರಥ ಯಾತ್ರೆಗೆ ತೆರಳಿದ ವೇಳೆ ಕೆಲವು ಕಿಡಿಗೇಡಿಗಳು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ವಿಚಾರವನ್ನು ನಟಿ ಮಾಹಿಕ ಶರ್ಮಾ ಅವರೇ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬಹಿರಂಗಪಡಿಸಿದ್ದಾರೆ. ‘ಕಾರಿನಿಂದ ಇಳಿದು ದೇವಸ್ತಾನಕ್ಕೆ 20-25 ನಿಮಿಷ ನಡೆಯಬೇಕಿತ್ತು. ನಾನು ನನ್ನ ಸ್ನೇಹಿತರು ನಡೆದುಕೊಂಡು ಹೋಗುತ್ತಿದ್ದಾಗ ಕೆಲ ಹುಡುಗರು ಅವರಿಗೆ ಡಿಕ್ಕಿ ಹೊಡೆದರು. ನಂತರ ಅಶ್ಲೀಲ ಪದಗಳ ಪ್ರಯೋಗ ಮಾಡಿ ಮಾತನಾಡಿದರು. ಕೊನೆಗೆ ಹೊಡೆಯಲು ಸಹ ಮುಂದಾಗಿದ್ದರು’ ಎಂದು ತಿಳಿಸಿದ್ದಾರೆ.
ಹಾಗೇ ‘ಅಲ್ಲಿಯವರೆಗೂ ಹೋಗಿ ದೇವರ ದರ್ಶನ ಪಡೆಯದೇ, ದೇವರಿಗೆ ಪೂಜೆ ಸಲ್ಲಿಸದೇ ಹಾಗೆ ಬಂದಿದ್ದಕ್ಕೆ ಈಗಲೂ ನನಗೆ ಬೇಸರ ಇದೆ. ಅಷ್ಟರಮಟ್ಟಿಗೆ ಆ ಕಿಡಿಗೇಡಿಗಳು ನನ್ನ ಮನಸ್ಸಿನಲ್ಲಿ ಅಸುರಕ್ಷತೆಯ ಭಾವ ಮೂಡಿಸಿದರು. ಆ ಕಿರಾತಕರಿಗೆ ಜಗನ್ನಾಥನೇ ಸರಿಯಾದ ಬುದ್ಧಿ ಕಲಿಸುತ್ತಾನೆ' ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ