ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ರನ್ನು ಬಿಡುಗಡೆ ಮಾಡಲು 25 ಕೋಟಿ ರೂ.ಗಳ ಆಮಿಷವೊಡ್ಡಲಾಗಿತ್ತು ಎಂಬ ಆಘಾತಕಾರಿ ವಿಚಾರವೊಂದು ಹೊರಬಂದಿದೆ.
ಆರ್ಯನ್ ಮತ್ತು ಸಹಚರರನ್ನು ಬಂಧಿಸಿದ್ದ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಪರ ವ್ಯಕ್ತಿಯೊಬ್ಬರು ಫೋನ್ ಮೂಲಕ 25 ಕೋಟಿ ರೂ. ನೀಡಿದರೆ ಆರ್ಯನ್ ನ್ನು ಬಿಟ್ಟು ಬಿಡುವುದಾಗಿ ಆಫರ್ ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ವ್ಯಕ್ತಿಯೊಬ್ಬರು ಎನ್ ಸಿಬಿ ಅಧಿಕಾರಿ ಕೆಪಿ ಗೋಸಾವಿ ಬಾಡಿಗಾರ್ಡ್ ಈ ಆಪಾದನೆ ಮಾಡಿದ್ದಾರೆ! ಸಮೀರ್ ವಾಂಖೆಡೆ ಪರವಾಗಿ ಕೆಪಿ ಗೋಸಾವಿ ಫೋನ್ ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು 25 ಕೋಟಿ ರೂ. ಡೀಲ್ ಗೆ ಆಫರ್ ನೀಡಿದ್ದರು ಎಂದು ಬಾಡಿಗಾರ್ಡ್ ಆಪಾದಿಸಿದ್ದಾನೆ. ವಿಶೇಷವೆಂದರೆ ಇದೇ ಎನ್ ಸಿಬಿ ಅಧಿಕಾರಿ ಕೆಪಿ ಗೋಸಾವಿ, ಆರ್ಯನ್ ಬಂಧನದ ನಂತರ ಸೆಲ್ಫೀ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.