ನಿತ್ಯ ದೇಗುಲಕ್ಕೆ ಹೋಗುವುದರಿಂದ ಮನಸ್ಸಿಗೆ ಚೈತನ್ಯ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಬಹುತೇಕ ಜನರಿಗೆ ನಿತ್ಯ ದೇವಸ್ಥಾನಕ್ಕೆ ಹೋಗಿ ಇಷ್ಟ ದೈವಕ್ಕೆ ನಮಿಸುವ ತವಕ. ಆದರೆ, ಕೆಲಸದ ಒತ್ತಡ, ಧಾವಂತದ ಜೀವನಶೈಲಿಯಲ್ಲಿ ಅದು ಸಾಧ್ಯವಾಗುವುದಿಲ್ಲ.
ಆದರೆ, ನೀವು ದೇವಸ್ಥಾನಕ್ಕೆ ಹೋಗದೆಯೂ ದೈವ ದರ್ಶನ ಮಾಡಿದಷ್ಟು ಫಲ ಪಡೆಯಬಹುದು. ನಮ್ಮ ಶಾಸ್ತ್ರಗಳೇ ಹೇಳುವ ಪ್ರಕಾರ ದೇಗುಲಕ್ಕೆ ಹೋಗದೆಯೂ ಅದರ ಫಲ ಪಡೆಯುವ ಕೆಲ ಮಾರ್ಗಗಳಿವೆ.
ಸಾಮಾನ್ಯವಾಗಿ ದೇಗುಲದ ಶಿಖರದಲ್ಲಿ ಧ್ವಜ ಇರುವುದನ್ನ ನೋಡಿರುತ್ತಿರಿ. ಶಿಖರ ಮತ್ತು ಧ್ವಜಗಳೆರಡೂ ಅತ್ಯಂತ ಪವಿತ್ರ ಎಂದು ಭಾವಿಸಲಾಗುತ್ತದೆ. ಗರ್ಭಗುಡಿಯ ಮೇಲಿರುವ ಈ ಶಿಖರ ಧಾರ್ಮಿಕವಾಗಿ ಅತ್ಯಂತ ಮಹತ್ವ ಪಡೆದಿದೆ. ಹೀಗಾಗಿ, ನೀವು ಸಂಚರಿಸುವ ಮಾರ್ಗ ಮಧ್ಯೆ ಯಾವುದಾದರೂ ದೇಗುಲದ ಶಿಖರ ಕಂಡರೆ ಅದನ್ನ ನೋಡಿ ಕಣ್ಣು ಮುಚ್ಚಿ ಒಂದು ನಿಮಿಷ ಕಣ್ಣುಮುಚ್ಚಿ ಇಷ್ಟ ದೈವವನ್ನ ಪ್ರಾರ್ಥಿಸಿ. ಶಾಸ್ತ್ರಗಳಲ್ಲೇ ಹೇಳಿರುವ ಪ್ರಕಾರ ಶಿಖರ ದರ್ಶನಂ ಪಾಪ ವಿನಾಶಂ ಎಂಬ ಮಾತಿನಂತೆ. ಶಿಖರ ದರ್ಶನ ಹತ್ತಾರು ಪಾಪಗಳು ನಾಶವಾಗುತ್ತವೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ